
ಇತ್ತೀಚೆಗೆ ಕರೀನಾ ಹಂಚಿಕೊಂಡ ಕೆಲ ಫೋಟೋಗಳು ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಕರೀನಾ ಪ್ರಸ್ತುತ ಪತಿ ಸೈಫ್ ಅಲಿ ಖಾನ್ ಹಾಗೂ ಪುತ್ರರಾದ ತೈಮೂರ್ ಹಾಗೂ ಜೆಹಂಗೀರ್ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಈ ವಿಷಯ ಅವರ ಗಮನಕ್ಕೂ ಬಂದಿದೆ.
ಈ ಪ್ರಶ್ನೆಗೆ ಅವರು ಕ್ಯೂಟ್ ಉತ್ತರ ನೀಡಿದ್ದು, ತಾವು ಮತ್ತೊಮ್ಮೆ ಗರ್ಭಿಣಿ ಎಂಬ ವದಂತಿಗೆ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲ ಪತಿ ಸೈಫ್ ಅಲಿ ಖಾನ್ ಭಾರತೀಯ ಜನಸಂಖ್ಯೆಗೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ತಮಾಷೆಯಾಗಿ ಉತ್ತರಿಸುವ ಮೂಲಕ ತಾವು ಗರ್ಭಿಣಿ ಎಂದು ವದಂತಿ ಹಬ್ಬಿಸಿದವರಿಗೆ ಟಾಂಗ್ ನೀಡಿದ್ದಾರೆ.
https://www.instagram.com/p/CfjaQb4o9rN/?utm_source=ig_embed&ig_rid=de59837e-9334-4149-a64b-917543aa169e
https://www.instagram.com/p/Cft_-PWIasi/?utm_source=ig_embed&ig_rid=5cc42491-2e56-4693-8488-678edd7cffd7
https://www.instagram.com/p/CfgXx-lIYr_/?utm_source=ig_embed&ig_rid=4caf8522-1b72-4ffb-8bcc-40df1e202875