ಗಾಯಕಿ ನೇಹಾ ಕಕ್ಕರ್ ಅವರು ತಮ್ಮ ಪತಿ ರೋಹನ್ಪ್ರೀತ್ ಸಿಂಗ್ ಜೊತೆ ಬೇಬಿ ಬಂಪ್ ನ ಫೋಟೋ ಹಂಚಿಕೊಂಡು, ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ರೋಹನ್ ಪ್ರೀತ್ ಸಿಂಗ್ ಜೊತೆ ನೇಹಾ ವಿವಾಹವಾಗಿ ಎರಡು ತಿಂಗಳಷ್ಟೇ ಕಳೆದಿದೆ. ಇಷ್ಟು ಬೇಗ ಗರ್ಭಿಣಿ ಆದ್ರಾ ಎಂಬುದು ಅಭಿಮಾನಿಗಳಿಗೆ ಅಚ್ಚರಿ ತಂದಿತ್ತು. ಆದರೆ ನಿಜ ವಿಷಯ ಏನಂದ್ರೆ, ಅವರು ಒಂದು ಹಾಡಿಗಾಗಿ ಈ ರೀತಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಫೋಟೋ ನೋಡಿ ಮೋಸ ಹೋಗಿರುವುದಾಗಿ ಕಪಿಲ್ ಶರ್ಮಾ ಹೇಳಿದ್ದಾರೆ. ‘ಕಾಂಟಾ ಲಗಾ’ ಹಾಡನ್ನು ಪ್ರಚಾರ ಮಾಡಲು ಕಪಿಲ್ ಶರ್ಮಾ ಶೋನಲ್ಲಿ ಸೆಲೆಬ್ರಿಟಿ ಅತಿಥಿಯಾಗಿ ನೇಹಾ ಭಾಗವಹಿಸಿದ್ದಾರೆ. ಬೇಬಿ ಬಂಪ್ನೊಂದಿಗೆ ನೇಹಾ ಚಿತ್ರವನ್ನು ನೋಡಿ ಮೂರ್ಖರಾಗಿದ್ದಾಗಿ ಈ ವೇಳೆ ಕಪಿಲ್ ಶರ್ಮಾ ಬಹಿರಂಗಪಡಿಸಿದ್ದಾರೆ.
’ದಿ ಕಂಜೋರಿಂಗ್’ ಚಿತ್ರಕ್ಕೆ ಸ್ಪೂರ್ತಿಯಾದ ಬಂಗಲೆ ಮಾರಾಟಕ್ಕೆ…! ದಂಗಾಗಿಸುವಂತಿದೆ ಇದರ ಬೆಲೆ
ಈ ವಾರಾಂತ್ಯದಲ್ಲಿ ‘ದಿ ಕಪಿಲ್ ಶರ್ಮಾ ಶೋ’ಗೆ ಅತಿಥಿಯಾಗಿದ್ದ ನೇಹಾ ಅವರೊಂದಿಗೆ ಮಾತನಾಡುತ್ತಾ, ಕಪಿಲ್ ಈ ಘಟನೆಯನ್ನು ನೆನಪಿಸಿದ್ದಾರೆ. “ನಾನು ತುಂಬಾ ಭಾವುಕನಾಗಿದ್ದೇನೆ, ನಾನು ಅವಳನ್ನು ಹಲವು ವರ್ಷಗಳಿಂದ ತಿಳಿದಿದ್ದೇನೆ, ಹಾಗಾಗಿ ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಫೋಟೋ ನೋಡಿ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದೆ.
“ಅಲ್ಲದೆ ನನ್ನ ಶುಭಾಶಯ ಕಳುಹಿಸಲು ವೈಯಕ್ತಿಕವಾಗಿ ನೇಹಾಗೆ ಸಂದೇಶ ಕಳುಹಿಸಿದ್ದೆ. ಭಯ್ಯಾ, ಇದು ಒಂದು ಹಾಡಿಗೆ ಮಾಡಿರುವುದು ಎಂದು ಹೇಳಿದಾಗ ನನಗೆ ಅರಿವಾಯಿತು” ಎಂದು ಕಪಿಲ್ ಹೇಳಿದ್ದಾರೆ.