alex Certify BIG NEWS: ‘ಬಾಬಾ ಕಾ ಡಾಬಾ’ ಖ್ಯಾತಿಯ ಕಾಂತಾ ಪ್ರಸಾದ್ ಆತ್ಮಹತ್ಯೆ ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಬಾಬಾ ಕಾ ಡಾಬಾ’ ಖ್ಯಾತಿಯ ಕಾಂತಾ ಪ್ರಸಾದ್ ಆತ್ಮಹತ್ಯೆ ಯತ್ನ

ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್​​ ನಿದ್ದೆ ಮಾತ್ರೆಯನ್ನ ಸೇವಿಸಿ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಂತಾ ಪ್ರಸಾದ್​ರನ್ನ ರಾತ್ರಿ 11.30ರ ಸುಮಾರಿಗೆ ಸಫ್ದರ್​ಜಂಗ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಡರಾತ್ರಿ ಬಾಬಾ ಕಾ ಡಾಬಾ ಖ್ಯಾತಿಯ 80 ವರ್ಷದ ಕಾಂತಾ ಪ್ರಸಾದ್​ರನ್ನ ಸಫ್ದರ್​ಜಂಗ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಂತಾ ಪ್ರಸಾದ್​ ಮದ್ಯ ಹಾಗೂ ನಿದ್ದೆ ಮಾತ್ರೆಯನ್ನ ಸೇವಿಸಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕಾಂತಾ ಪ್ರಸಾದ್​ ಪುತ್ರ ಕೂಡ ಇದೇ ಹೇಳಿಕೆಯನ್ನ ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ದಕ್ಷಿಣ ಡಿಸಿಪಿ ಅತುಲ್​ ಕುಮಾರ್ ಮಾಹಿತಿ ನೀಡಿದ್ರು.

ಕಳೆದ ವರ್ಷ ಸೋಶಿಯಲ್​ ಮೀಡಿಯಾದಲ್ಲಿ ಬಾಬಾ ಕಾ ಡಾಬಾದಲ್ಲಿ ಗ್ರಾಹಕರೇ ಇಲ್ಲ ಎಂದು ಅಳುವ ಮೂಲಕ ವೈರಲ್​ ಆಗಿದ್ದರು, ಈ ವಿಡಿಯೋ ಬಳಿಕ ಕಾಂತಾ ಪ್ರಸಾದ್​​ ದಂಪತಿಗೆ ಸಹಾಯದ ಮಹಾಪೂರವೇ ಹರಿದುಬಂದಿತ್ತು.

ಕಾಂತಾ ಪ್ರಸಾದ್​ಗೆ ಹೊಸ ರೆಸ್ಟಾರೆಂಟ್​ ನಿರ್ಮಾಣಕ್ಕೆ ಸಹಾಯ ಮಾಡಿದ್ದ ಸಾಮಾಜಿಕ ಕಾರ್ಯಕರ್ತರಾದ ಪ್ರಸಾದ್​​ ಒಟ್ಟು 42 ಲಕ್ಷ ರೂಪಾಯಿ ಸಹಾಯ ಧನ ಪಡೆದಿದ್ದಾರೆ ಎಂದು ಹೇಳಿದ್ದರು. ಆದರೆ ಈ ಆರೋಪಗಳನ್ನ ಕಾಂತಾ ಪ್ರಸಾದ್​ ತಳ್ಳಿ ಹಾಕಿದ್ದರು.

ಆದರೆ ಈ ರೆಸ್ಟಾರೆಂಟ್​ ಉದ್ಯಮ ಕಾಂತಾ ಪ್ರಸಾದ್​​ರ ಕೈ ಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಪರಿಣಾಮವಾಗಿ ಕಾಂತಾ ಪ್ರಸಾದ್​ ತನ್ನ ಹಳೆಯ ಬಾಬಾ ಕಾ ಡಾಬಾಗೆ ವಾಪಸ್ಸಾಗಿದ್ದರು.

ರೆಸ್ಟಾರೆಂಟ್​ ಆರಂಭದಲ್ಲಿ ಒಳ್ಳೆಯ ಲಾಭವನ್ನೇ ಗಳಿಸಿತ್ತು. ಆದರೆ ಕ್ರಮೇಣವಾಗಿ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಲೇ ಹೋಯಿತು. ಆದಾಯಕ್ಕಿಂತ ಖರ್ಚು ಹೆಚ್ಚಾಯಿತು. ರೆಸ್ಟಾರೆಂಟ್​ ನಡೆಸಲು 1 ಲಕ್ಷ ರೂಪಾಯಿ ಖರ್ಚಾಗುತ್ತಿದ್ದರೆ ಸಂಪಾದನೆ ಮಾತ್ರ 30 ಸಾವಿರ ರೂಪಾಯಿ ಇರುತ್ತಿತ್ತು. ಹೀಗಾಗಿ ಹಳೆಯ ಡಾಬಾಗೆ ವಾಪಸ್ಸಾಗಿದ್ದು ತಾನು ಇದರಲ್ಲೇ ಖುಷಿಯಾಗಿದ್ದೇನೆ ಎಂದು ಕಾಂತಾ ಪ್ರಸಾದ್​ ಹೇಳಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...