ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯ ಭಾಗವಾಗಿ ಕಾನ್ಪುರದ ಕೆಲವು ಭಾಗಗಳಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿತ್ತು. ಈ ವೇಳೆ ಪರಸ್ಪರ ಕಲ್ಲು ತೂರಾಟ ಅದರ ಜೊತೆಗೆ ಪೆಟ್ರೋಲ್ ಬಾಂಬ್ ಸಹ ಬಳಸಲಾಗಿದೆ. ಈ ಘಟನೆಯಲ್ಲಿ ಹಲವಾರು ಜನರಿಗೆ ಗಂಭೀರ ರೂಪದ ಗಾಯಗಳಾಗಿವೆ.
ಉತ್ತರ ಪ್ರದೇಶದ ಕಾನ್ಪುರ ಹಿಂಸಾಚಾರದ ಆರೋಪಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದ್ದು, ಒಂದೆಡೆ ಎಸ್ಐಟಿ ಮತ್ತು ಎಟಿಎಸ್ ಎರಡೂ ಹಿಂಸಾಚಾರದ ಎಲ್ಲಾ ಅಂಶಗಳ ತನಿಖೆಯಲ್ಲಿ ತೊಡಗಿವೆ. ಈ ನಡುವೆ ಹಿಂಸಾಚಾರವನ್ನು ಹರಡಿದ ದುಷ್ಕರ್ಮಿಗಳಿಗೆ ಪೆಟ್ರೋಲ್ ಪಂಪ್‌ನಿಂದ ಬಾಟಲಿಗಳಲ್ಲಿ ಪೆಟ್ರೋಲ್ ನೀಡಲಾಗಿದೆ. ತನಿಖೆ ವೇಳೆ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಇದಕ್ಕೆ ಸಾಕ್ಷಿ ಸಿಕ್ಕಿದೆ. ಈ ಕಾರಣಕ್ಕಾಗಿ ಪೆಟ್ರೋಲ್ ಪಂಪ್ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
ʼಫೇಸ್ ಬುಕ್ʼ ಪ್ರೊಫೈಲ್ ವೀಕ್ಷಿಸಿರುವವರ ಮಾಹಿತಿಗಾಗಿ ಹೀಗೆ ಮಾಡಿ
ಕಾನ್ಪುರದಲ್ಲಿ ನಡೆದ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್‌ಗಳನ್ನಬಳಸಿದ್ದು. ಪೊಲೀಸರು ಸಿಸಿ ಟಿವಿ ದೃಶ್ಯವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.
ಕಾನ್ಪುರ ಹಿಂಸಾಚಾರದ ಹಿಂದೆ ಯಾರೆಲ್ಲ ಕೈವಾಡವಿದೆ, ಇದರ ಹಿಂದೆ ಯಾರೆಲ್ಲರ ಕುಮ್ಮಕ್ಕು ಇದೆ ಅನ್ನೊದರ ಕುರಿತು ಪೊಲೀಸರು ಕೂಲಂಕುಶವಾಗಿ ತನಿಖೆ ಮಾಡುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಎಡಿಜಿ,ಎಟಿಎಸ್ ನವೀನ್ ಅರೋರಾ ಈಗಾಗಲೇ ಕಾನ್ಪುರ ತಲುಪಿದ್ದು, ಅವರೊಂದಿಗೆ ವಿಶೇಷ ಕಮಾಂಡೋಸಹ ಆಗಮಿಸಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಗಸ್ತುತಿರುಗುತ್ತಿದ್ದಾರೆ.
ಈಗಾಗಲೇ ಸಿಸಿಟಿವಿಯಲ್ಲಿ ಸಿಕ್ಕ ಕೆಲವು ಫುಟೇಜ್‌ಗಳಲ್ಲಿ ಆರೋಪಿಗಳನ್ನ ಗುರುತಿಸಲಾಗುತ್ತಿದ್ದು, ಈಗಾಗಲೇ 24 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಕೇವಲ 4-6 ಜನರ ಹೆಸರನ್ನ ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಸಂಪರ್ಕ ಹೊಂದಿದ್ದಾನೆ ಅಂತ ಹೇಳಲಾಗುತ್ತಿದೆ.