alex Certify ʼಫೇಸ್‌ ಬುಕ್ʼ ಪ್ರೊಫೈಲ್ ವೀಕ್ಷಿಸಿರುವವರ ಮಾಹಿತಿಗಾಗಿ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಫೇಸ್‌ ಬುಕ್ʼ ಪ್ರೊಫೈಲ್ ವೀಕ್ಷಿಸಿರುವವರ ಮಾಹಿತಿಗಾಗಿ ಹೀಗೆ ಮಾಡಿ

ಪ್ರತಿ ಫೇಸ್‌ಬುಕ್ ಖಾತೆಯು ಎಷ್ಟು ಡೇಟಾ ಮತ್ತು ವೈಯಕ್ತಿಕ ಮಾಹಿತಿಯನ್ನು ಹೊಂದಿದೆ ಎಂಬುದನ್ನು ಗಮನಿಸಿದರೆ, ಕಾಲಕಾಲಕ್ಕೆ ನಿಮ್ಮ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂಬುದು ಮನವರಿಕೆಯಾದೀತು.

ಗೌಪ್ಯತೆ ಸೆಟ್ಟಿಂಗ್‌ಗಳನ್ನು ಲೆಕ್ಕಿಸದ ಕಾರಣ ಕೆಲವು ಫೇಸ್‌ಬುಕ್‌ ಮಾಹಿತಿಯು ಸಾರ್ವಜನಿಕವಾಗಿರುತ್ತವೆ. ಇದನ್ನು ಬಳಸಿಕೊಂಡು ಜನ ನಿಮ್ಮ ಖಾತೆಗೆ ಭೇಟಿ ನೀಡಬಹುದು. ಹೊಸ ಪೋಸ್ಟ್‌ಗಳ ನೋಟಿಫಿಕೇಶನ್‌ ಅವರಿಗೂ ಹೋಗಬಹುದು.

ಇದಕ್ಕೆ ವ್ಯತಿರಿಕ್ತವಾಗಿ, ನಿಮ್ಮ ಫೇಸ್‌ಬುಕ್‌ ಖಾತೆಯ ಪ್ರೊಫೈಲನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ನೋಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಸೆಟ್ಟಿಂಗ್‌ನಲ್ಲಿ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ.

ಫೇಸ್‌ಬುಕ್ ಪ್ರೊಫೈಲ್ ಅನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ಐಫೋನ್‌ನಲ್ಲಿ ಹೀಗೆ ನೋಡಬಹುದು –

• ಫೇಸ್‌ಬುಕ್‌ ಅಪ್ಲಿಕೇಶನ್ ತೆರೆದ ನಂತರ, ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗ್ ಇನ್ ಆಗಿ.

• ಅಪ್ಲಿಕೇಶನ್‌ನ ಬಲ ಮೂಲೆಯಲ್ಲಿ, ನಿಮ್ಮ ಮುಖ್ಯ ಮೆನುವನ್ನು ಪ್ರವೇಶಿಸಲು “ಮೂರು ಲೈನ್” ಇದ್ದು, ಅದನ್ನು ಕ್ಲಿಕ್‌ ಮಾಡಿ.

• ಡ್ರಾಪ್-ಡೌನ್ ಮೆನು ತೆರೆದುಕೊಂಡಾಗ ಅದರಿಂದ ” Privacy Shortcuts” ಆಯ್ಕೆಮಾಡಿ.

• ಅದರ ಡ್ರಾಪ್-ಡೌನ್ ಮೆನುವಿನಿಂದ ” Who Viewed My Profile” ಆಯ್ಕೆಮಾಡಿ.

ಇದೇ ರೀತಿ, ಮ್ಯಾಕ್ ಅಥವಾ ಪಿಸಿಯಲ್ಲಿ ಫೇಸ್‌ಬುಕ್ ಪ್ರೊಫೈಲನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ಹೀಗೆ ನೋಡಬಹುದು –

• ನಿಮ್ಮ ವೆಬ್ ಬ್ರೌಸರ್ ಓಪನ್‌ ಮಾಡಿ

• ಅದರಲ್ಲಿ ಫೇಸ್‌ಬುಕ್‌ ಪುಟಕ್ಕೆ ಹೋಗಿ ಮತ್ತು ಲಾಗ್ ಇನ್ ಆಗಿ

• ನಿಮ್ಮ ಪ್ರೊಫೈಲನ್ನು ಪ್ರವೇಶಿಸುವುದಕ್ಕೆ, ನಿಮ್ಮ “user name” ಮೇಲೆ ಕ್ಲಿಕ್ ಮಾಡಿ.

• ಪ್ರೊಫೈಲ್ ಪುಟದ ಖಾಲಿ ಭಾಗದಲ್ಲಿ ಕರ್ಸರ್‌ ಇಟ್ಟು ಮೌಸ್‌ನ ಬಲ ಭಾಗ ಕ್ಲಿಕ್ ಮಾಡಿ.

• ಮೆನುವಿನಿಂದ, “View Page Source” ಆಯ್ಕೆಮಾಡಿ. ಪಾಪ್-ಅಪ್ ಕನ್ಸೋಲ್ ಪುಟ ಹಲವು ಟ್ಯಾಬ್‌ಗಳನ್ನು ತೋರಿಸುತ್ತದೆ. ಅದರಲ್ಲಿ ಪುಟದ ಸೋರ್ಸ್‌ ಕೋಡ್‌ ಕೂಡ ಇರುತ್ತದೆ.

• ಸರ್ಚ್‌ ಬಾರ್‌ನಲ್ಲಿ, “Ctrl+F” ಒತ್ತಿರಿ.

• ಸರ್ಚ್‌ ಬಾರ್‌ನಲ್ಲಿ, ಉಲ್ಲೇಖಗಳಿಲ್ಲದೆಯೇ “InitialChatFriendsList” ಎಂದು ಟೈಪ್ ಮಾಡಿ.

• ಇದರಿಂದ ಪ್ರೊಫೈಲ್ ಕೋಡ್ ಸಂಖ್ಯೆಗಳ ಪಟ್ಟಿ ಕಾಣುತ್ತದೆ. ಒಮ್ಮೆ ಒಂದು ಪ್ರೊಫೈಲ್ ಕೋಡ್ ಸಂಖ್ಯೆ ಹೈಲೈಟ್ ಮಾಡಿ, ಕಾಪಿ ಮಾಡಿಕೊಳ್ಳಬೇಕು.

• ನಿಮ್ಮ ಬ್ರೌಸರ್‌ನಲ್ಲಿ ಹೊಸ ಟ್ಯಾಬ್ ಓಪನ್‌ ಮಾಡಿ.

• ಅದರಲ್ಲಿ http://facebook.com/ ಎಂದು ಟೈಪ್ ಮಾಡಿ. ಕೋಡ್ ಸಂಖ್ಯೆಗಳ ಪೈಕಿ ಒಂದನ್ನು “/” ನಂತರ ಪೇಸ್ಟ್‌ ಮಾಡಿ. ನಿಮ್ಮ ಪುಟವನ್ನು ಇತ್ತೀಚೆಗೆ ನೋಡಿದ ಪ್ರೊಫೈಲನ್ನು ಇದು ನಿಮಗೆ ತೋರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...