ಸ್ಯಾಂಡಲ್ವುಡ್ ನಟಿ ಸೌಜನ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡರಲ್ಲೂ ಕಾಣಿಸಿಕೊಂಡಿದ್ದ ನಟಿ ಸೌಜನ್ಯ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಂಬಳಹೋಡಿನ ದೊಡ್ಡಬೆಲೆಯ ಸನ್ ವರ್ತ್ ಅಪಾರ್ಟ್ಮೆಂಟ್ನಲ್ಲಿ ನಟಿ ನೇಣಿಗೆ ಕೊರಳೊಡ್ಡಿದ್ದಾರೆ.
ಸೌಜನ್ಯ ಸಾವಿಗು ಮೂರು ದಿನಗಳ ಮುಂಚೆಯೇ ಡೆತ್ ನೋಟ್ ಬರೆದಿದ್ದಾರೆ. ಇದರಲ್ಲಿ ನಟಿ ತಮ್ಮ ಪೋಷಕರು ಹಾಗೂ ಅಣ್ಣನ ಬಳಿ ಕ್ಷಮೆ ಕೇಳಿದ್ದಾರೆ. ತಮ್ಮ ಕಷ್ಟವಾಗ್ತಿದೆ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ. ಅಲ್ಲದೇ ಅಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಂದೆಗೆ ಹೇಳಿದ್ದಾರೆ.ಹಾಗೂ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡಿದ್ದಾರೆ.
ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರ ಮೂಲದವರಾಗಿದ್ದಾರೆ. ಅನೇಕ ಧಾರವಾಹಿಗಳು ನಟಿಸಿದ್ದ ಇವರು ಚೌಕಟ್ಟು ಹಾಗೂ ಫನ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು. ಸೌಜನ್ಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.