alex Certify ಪ್ರತಿಷ್ಟಿತ ಫೋರ್ಬ್ಸ್ ಇಂಡಿಯಾದ ಪಟ್ಟಿಯಲ್ಲಿ ಕನ್ನಡತಿ, ನಟಿ ‘ರಶ್ಮಿಕಾ ಮಂದಣ್ಣ’ ಗೆ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಟಿತ ಫೋರ್ಬ್ಸ್ ಇಂಡಿಯಾದ ಪಟ್ಟಿಯಲ್ಲಿ ಕನ್ನಡತಿ, ನಟಿ ‘ರಶ್ಮಿಕಾ ಮಂದಣ್ಣ’ ಗೆ ಸ್ಥಾನ

ಫೋರ್ಬ್ಸ್ ಇಂಡಿಯಾ ನಿಯತಕಾಲಿಕವು ತನ್ನ ವಾರ್ಷಿಕ 30 ಅಂಡರ್ 30 ಪಟ್ಟಿಯನ್ನು ಅನಾವರಣಗೊಳಿಸಿದೆ. ಭಾರತದ ಮೂವತ್ತು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕನ್ನಡತಿ ನಟಿ ರಶ್ಮಿಕಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

27 ವರ್ಷದ ನಟಿ ರಶ್ಮಿಕಾ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ನಂತರ ಕನ್ನಡ ಸೇರಿದಂತೆ ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ವಂಶಿ ಪೈಡಿಪಲ್ಲಿ ಅವರ ಆಕ್ಷನ್ ಚಿತ್ರ ವಾರಿಸುನಲ್ಲಿ ತಮಿಳು ಸೂಪರ್ ಸ್ಟಾರ್ ವಿಜಯ್ ಅವರೊಂದಿಗೆ ನಟಿಸಿದರು. ಈ ಚಿತ್ರವು ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು ₹ 300 ಕೋಟಿ ಗಳಿಸಿತು.

ರಶ್ಮಿಕಾ ಮಂದಣ್ಣ ಅನಿಮಲ್ ಸಿನಿಮಾ ಸಕ್ಸಸ್ ಬಳಿಕ ಈ ವರ್ಷ ಪುಷ್ಪಾ 2: ದಿ ರೂಲ್, ರೇನ್ಬೋ, ದಿ ಗರ್ಲ್ಫ್ರೆಂಡ್ ಮತ್ತು ಚಾವಾ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...