alex Certify ಜಿಗ್ನೇಶ್​ ಮೇವಾನಿ, ಕನ್ಹಯ್ಯ ಕುಮಾರ್ ಇಂದು​ ಕಾಂಗ್ರೆಸ್​ ಸೇರ್ಪಡೆ….!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಗ್ನೇಶ್​ ಮೇವಾನಿ, ಕನ್ಹಯ್ಯ ಕುಮಾರ್ ಇಂದು​ ಕಾಂಗ್ರೆಸ್​ ಸೇರ್ಪಡೆ….!?

ಸಿಪಿಐ ಮುಖಂಡ ಹಾಗೂ ಜೆಎನ್​ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಗುಜರಾತ್​ನ ದಲಿತ ನಾಯಕ ಜಿಗ್ನೇಶ್​ ಮೇವಾನಿ ಇಂದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬಿಜೆಪಿ ಆಡಳಿತದ ಗುಜರಾತ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ನಡೆಯಲಿದ್ದು ಅದಕ್ಕೂ ಮುಂಚಿತವಾಗಿ ಇದೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆಯಲಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಪಕ್ಷ ಸೇರ್ಪಡೆಯಾಗಿದ್ದ ಕನ್ಹಯ್ಯ ಕುಮಾರ್​ ಬಿಹಾರದ ಬೆಗುಸರಾಯ್​ನಲ್ಲಿ ಸ್ಪರ್ಧಿಸಿ ಬಿಜೆಪಿಯ ಗಿರಿರಾಜ್​​ ಸಿಂಗ್​ ಎದುರು ಸೋಲನ್ನು ಕಂಡಿದ್ದರು. ಮೂಲಗಳ ಪ್ರಕಾರ ದೆಹಲಿಯಲ್ಲಿಂದು ಕನ್ಹಯ್ಯ ಕುಮಾರ್​ ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಗುಜರಾತ್​ನ ವದ್ಗಾಮ್​ ಕ್ಷೇತ್ರದ ಪಕ್ಷೇತರ ಶಾಸಕ ಮೇವಾನಿ ಮಂಗಳವಾರ ಕಾಂಗ್ರೆಸ್​ಗೆ ಸೇರ್ಪಡೆಯಾಗೋದಾಗಿ ಶನಿವಾರ ಮಾಹಿತಿ ನೀಡಿದ್ದರು. ರಾಷ್ಟ್ರೀಯ ದಲಿತ ಅಧಿಕಾರ ಮಂಚ್​ನ ಮೇವಾನಿ 2017ರಲ್ಲಿ ಕಾಂಗ್ರೆಸ್​ನ ಬೆಂಬಲದೊಂದಿಗೆ ಬನಸ್ಕಾಂತ ಜಿಲ್ಲೆಯ ವಡ್ಗಾಂ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...