
ಈ ಕಾರ್ಯಕ್ರಮಕ್ಕೆ ನಟಿ ಕಂಗನಾ ಪ್ರಸಿದ್ಧ ಸಬ್ಯಸಾಚಿಯಿಂದ ತಯಾರಿಸಲಾದ ಸೀರೆಯನ್ನು ಧರಿಸಿದ್ದರು. ಈ ಸೀರೆಯು ಸದ್ಯ ಇಂಟರ್ನೆಟ್ನಲ್ಲಿ ಭಾರೀ ಸುದ್ದಿಯಲ್ಲಿದೆ.
ಕಂಗನಾ ಎಂದಿಗೂ ಸೀರೆಯನ್ನು ಪ್ರೀತಿಸುತ್ತಾರೆ. ಹೀಗಾಗಿ ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸೀರೆಯಲ್ಲೇ ಕಾಣಿಸಿಕೊಳ್ತಾರೆ.
ಪದ್ಮಶ್ರೀ ಪ್ರಶಸ್ತಿ ಸ್ವೀಕಾರದ ವೇಳೆಯೂ ಬಂಗಾರ ಬಣ್ಣದ ಸೀರೆಯನ್ನು ಧರಿಸಿದ್ದರು. ಇದಕ್ಕೆ ಅತ್ಯಂತ ಸುಂದರವಾದ ಜುಮ್ಕಿಯನ್ನು ಧರಿಸಿದ್ದರು. ಈ ಆಭರಣ ಹಾಗೂ ಸೀರೆಗಳನ್ನು ಸಬ್ಯಸಾಚಿ ಮುಖರ್ಜಿ ಕಂಗನಾರಿಗಾಗಿ ವಿನ್ಯಾಸಗೊಳಿಸಿದ್ದರು.
ಕಂಗನಾರ ಫೋಟೋವನ್ನು ಡಿಸೈನರ್ ಸಬ್ಯಸಾಚಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದೆ. ಇದಾಗಿ ಕೆಲವೇ ನಿಮಿಷಗಳಲ್ಲಿ ಕಂಗನಾರ ಸೀರೆ ಹಾಗೂ ಆಭರಣಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಅನೇಕರು ಕಂಗನಾರ ರೂಪವನ್ನು ಹಾಡಿಹೊಗಳಿದ್ದಾರೆ.