ಇತ್ತೀಚೆಗೆ ತಾನೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ, ತಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಎಂದಿದ್ದು, ಇದೇ ವೇಳೆ, “ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯೆಯಾಗದೇ ಇದ್ದರೂ, ಅಗತ್ಯ ಬಿದ್ದಲ್ಲಿ, ರಾಷ್ಟ್ರೀಯವಾದಿ ಪಕ್ಷಗಳ ಪರ ಪ್ರಚಾರ ಮಾಡಲಿದ್ದೇನೆ,” ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಸಿದ ಸೋನು ನಿಗಂ…! ಈ ವಾಹನದ ವಿಶೇಷತೆಯೇನು ಗೊತ್ತಾ…?
ಪಂಜಾಬ್‌ನಲ್ಲಿ ತಮ್ಮ ಕಾರನ್ನು ಪ್ರತಿಭಟನಾಕಾರರು ಅಡ್ಡಗಟ್ಟಿದ ಕುರಿತು ಪ್ರತಿಕ್ರಿಯಿಸಿದ ಕಂಗನಾ, “ನನ್ನ ಕಾರನ್ನು ನಿಲ್ಲಿಸಿದವರು ರೈತರಲ್ಲ, ಅವರು ಸಮಾಜ ವಿರೋಧಿ ಶಕ್ತಿಗಳು. ಜೊತೆಗೆ ಅದೇ ಜಂಗುಳಿಯಲ್ಲಿದ್ದ ಅನೇಕರು ನನ್ನನ್ನು ಹೋಗಲು ಬಿಡಲು ಆಗ್ರಹಿಸುತ್ತಿದ್ದರು,” ಎಂದಿದ್ದು, ” ರಾಷ್ಟ್ರವಾದಿಗಳು ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ,” ಎಂದಿದ್ದಾರೆ.
ಯಾವಾಗಲೂ ಮಾತುಗಳಲ್ಲೇ ಬಾಂಬ್ ಹಾಕುವ ಕಂಗನಾ, ಶ್ರೀಕೃಷ್ಣ ಜನ್ಮಭೂಮಿಗೆ ಭೇಟಿಯಿತ್ತಾಗಲೂ ಆ ವರಸೆ ಮುಂದುವರೆಸಿದ್ದು, “ಶ್ರೀ ಕೃಷ್ಣ ಜನ್ಮಭೂಮಿಯ ಕೆಲವೊಂದು ಭಾಗಗಳು ದರ್ಶನಕ್ಕೆ ತೆರೆದುಕೊಳ್ಳುತ್ತಿಲ್ಲ. ಯೋಗೀಜೀ ಈ ವಿಚಾರವಾಗಿ ಏನನ್ನಾದರೂ ಮಾಡುತ್ತಾರೆ ಎಂದು ಭಾವಿಸಿದ್ದೇನೆ,” ಎಂದು ಹೇಳಿದ್ದಾರೆ.