ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಜೈಪುರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಮುಜುಗರದ ಪ್ರಸಂಗವೊಂದಕ್ಕೆ ಸಾಕ್ಷಿಯಾದರು. ಶಿಕ್ಷಕರ ವರ್ಗಾವಣೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಲಂಚ ಪಡೆಯಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ನೆರೆದವರು ಹೌದು ಎಂದು ಉತ್ತರಿಸಿದಾಗ ಮುಜುಗರದ ಸ್ಥಿತಿ ಎದುರಿಸಿದರು.
ಕಳೆದು ಹೋಗಿದ್ದ ಪರ್ಸ್ ನ್ನು ಹುಡುಕಿಕೊಂಡು ಬಂದು ಹಿಂತಿರುಗಿಸಿದ ಅಪರಿಚಿತ…!
ಶಿಕ್ಷಕರಿಗೆ ಪಾರದರ್ಶಕ ವರ್ಗಾವಣೆ ನೀತಿಯ ಅಗತ್ಯತೆಯ ಬಗ್ಗೆ ಗೆಹ್ಲೋಟ್ ಮಾತನಾಡುತ್ತಿದ್ದ ವೇಳೆ ಈ ಪ್ರಸಂಗ ನಡೆದಿದೆ. ವರ್ಗಾವಣೆ ಮಾಡಲು ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬರ್ತಿದೆ. ಇದು ಸತ್ಯವೋ ಸುಳ್ಳೋ ಎಂಬುದು ನನಗೆ ತಿಳಿದಿಲ್ಲ. ಲಂಚವನ್ನು ಪಡೆಯುತ್ತಾರಾ..? ಎಂದು ಗೆಹ್ಲೋಟ್ ಕೇಳಿದ್ದಾರೆ.
ಕೂಡಲೇ ಕಾರ್ಯಕ್ರಮದಲ್ಲಿ ಹಾಜರಿದ್ದ ಶಿಕ್ಷಕರು ಹೌದು ಎಂದು ಉತ್ತರ ನೀಡಿದ್ದಾರೆ. ಶಿಕ್ಷಕರ ಈ ಉತ್ತರ ಕೇಳಿ ತಬ್ಬಿಬ್ಬಾದ ಗೆಹ್ಲೋಟ್ ಇದು ನಿಜಕ್ಕೂ ಆಶ್ಚರ್ಯಕರ ವಿಚಾರ ಎಂದು ಹೇಳಿದರು. ಹಾಗೂ ಕೂಡಲೇ ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಾಥಮಿಕ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ಕಡೆ ತಿರುಗಿ ನೋಡಿದರು.
ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪಾಡ್ ರೂಮ್ ಓಪನ್…! ಏನಿದರ ವಿಶೇಷತೆ ಗೊತ್ತಾ..?
ಲಂಚವನ್ನು ನೀಡಿ ಶಿಕ್ಷಕರು ವರ್ಗಾವಣೆ ಮಾಡಿಸಿಕೊಳ್ಳಬೇಕಿದೆ ಎಂಬುದನ್ನು ಕೇಳಿಯೇ ನನಗೆ ದುಃಖವಾಗಿದೆ. ಈ ವರ್ಗಾವಣೆಗೆಂದೇ ಒಂದು ಪಾಲಿಸಿ ಮಾಡಬೇಕು. ಆಗ ಶಿಕ್ಷಕರಿಗೆ ವರ್ಗಾವಣೆಗಾಗಿ ಶಾಸಕರ ಬಳಿ ಹೋಗುವುದು ತಪ್ಪುತ್ತದೆ ಎಂದು ಹೇಳಿದ್ರು.
ಶಿಕ್ಷಕರು ತಮ್ಮ ಸೇವೆಯಲ್ಲಿ ಎಂದಿಗೂ ಆಲಸ್ಯ ತೋರಿಸಬಾರದು. ಉಳಿದ ಜವಾಬ್ದಾರಿಗಳನ್ನು ನಮ್ಮ ಹೆಗಲಿಗೆ ಬಿಟ್ಟು ಬಿಡಿ. ಶಾಲೆಗಳಲ್ಲಿ ಶಿಕ್ಷಣ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದ್ರು.