alex Certify ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪಾಡ್ ರೂಮ್‌ ಓಪನ್…! ಏನಿದರ ವಿಶೇಷತೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಪಾಡ್ ರೂಮ್‌ ಓಪನ್…! ಏನಿದರ ವಿಶೇಷತೆ ಗೊತ್ತಾ..?

ಬುಧವಾರ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಉದ್ಘಾಟನೆಗೊಂಡ ಹೊಸ ಪಿಒಡಿ ರೂಮ್‌ಗಳ ಫೋಟೋಗಳನ್ನು ರೈಲ್ವೆ ಸಚಿವಾಲಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪಾಡ್ ರೂಮ್ ಪರಿಕಲ್ಪನೆಯ ಕೊಠಡಿಗಳು ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಸೌಕರ್ಯವನ್ನು ಒದಗಿಸುತ್ತದೆ.

ಕ್ಯಾಪ್ಸುಲ್ ಹೋಟೆಲ್ ಎಂದೂ ಕರೆಯಲ್ಪಡುವ ಪಾಡ್ ಹೋಟೆಲ್, ಹಲವಾರು ಸಣ್ಣ ಕೊಠಡಿಗಳು ಅಥವಾ ಪಾಡ್‌ಗಳನ್ನು ಹೊಂದಿದೆ. ಪ್ರತಿಯೊಂದು ಕೂಡ ಒಂದೇ ಹಾಸಿಗೆಯನ್ನು ಹೊಂದಿರುತ್ತದೆ. ಈ ಹೋಟೆಲ್‌ಗಳನ್ನು ಮೊದಲು ಜಪಾನ್‌ನಲ್ಲಿ ಪ್ರಯಾಣಿಕರಿಗೆ ಆರಾಮದಾಯಕವಾದ ವಸತಿ ಸೌಕರ್ಯವನ್ನು ಒದಗಿಸಲು ಪ್ರಾರಂಭಿಸಲಾಯಿತು. ಇದೀಗ ತಡವಾಗಿ ಭಾರತದಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿದೆ. ಅರ್ಬನ್‌‌ ಪಾಡ್ ಭಾರತದಲ್ಲಿ ತೆರೆದ ಮೊದಲ ಬೊಟಿಕ್ ಪಾಡ್ ಹೋಟೆಲ್‌ಗಳಲ್ಲಿ ಒಂದಾಗಿದೆ.

ಮಹಾರಾಷ್ಟ್ರದ ಮುಂಬೈ ಸೆಂಟ್ರಲ್ ಸ್ಟೇಷನ್‌ನಲ್ಲಿರುವ ಅರ್ಬನ್‌ ಪಾಡ್ ಹೋಟೆಲ್‌ನಲ್ಲಿ ಪಾಡ್ ರೂಮ್‌ಗಳ ಫೋಟೋಗಳನ್ನು ರೈಲ್ವೆ ಸಚಿವಾಲಯವು ಹಂಚಿಕೊಂಡಿದೆ. ಇದನ್ನು ಪ್ರಯಾಣಿಕರು ಅಲ್ಪಾವಧಿಗೆ ಕಾಯ್ದಿರಿಸಬಹುದು.

ಅತ್ಯಾಧುನಿಕ ಪಾಡ್ ರೂಂಗಳನ್ನು ಬುಧವಾರ ಬೆಳಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ಪಾಟೀಲ್ ದಾನ್ವೆ ಉದ್ಘಾಟಿಸಿದ್ದಾರೆ. ಕ್ಯಾಪ್ಸುಲ್ ತರಹದ ಕೊಠಡಿಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಹವಾನಿಯಂತ್ರಿತ ಪಾಡ್‌ಗಳಲ್ಲಿ ಉಚಿತ ವೈ-ಫೈ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ರೀಡಿಂಗ್ ಲೈಟ್ ಕೂಡ ಇರುತ್ತದೆ.

ವರದಿಯ ಪ್ರಕಾರ, ಪ್ರಯಾಣಿಕರು ಕ್ರಮವಾಗಿ 999 ರೂ. ಮತ್ತು 1,999 ರೂ.ಗೆ ಪಾಡ್ ಹೋಟೆಲ್ ಅನ್ನು 12 ಮತ್ತು 24 ಗಂಟೆಗಳ ಕಾಲ ಬುಕ್ ಮಾಡಬಹುದು. ಖಾಸಗಿ ಪಾಡ್‌ಗೆ 12 ಗಂಟೆಗೆ 1,249 ರೂ. ಇದ್ದರೆ, 24 ಗಂಟೆಗೆ 2,499 ರೂ. ವೆಚ್ಚವಾಗಲಿದೆ.

— Ministry of Railways (@RailMinIndia) November 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...