alex Certify ಕೇವಲ ಒಂದು ಎಲೆಯಿಂದ ಬೆಳೆಯುತ್ತೆ ಈ ಮ್ಯಾಜಿಕಲ್​ ಔಷಧೀಯ ಸಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಒಂದು ಎಲೆಯಿಂದ ಬೆಳೆಯುತ್ತೆ ಈ ಮ್ಯಾಜಿಕಲ್​ ಔಷಧೀಯ ಸಸ್ಯ

ಸಾಮಾನ್ಯವಾಗಿ ಯಾವುದೇ ಸಸ್ಯವನ್ನು ಬೆಳೆಸಲು ಅದರ ಬೀಜ ಬಿತ್ತಬೇಕು ಅಥವಾ ಕತ್ತರಿಸಿದ ತುಂಡನ್ನು ನೆಡಬೇಕಾಗುತ್ತದೆ. ಆದರೆ ಈ ಎರಡು ವಸ್ತುಗಳ ಅಗತ್ಯವಿಲ್ಲದ ಬೆಳೆಸಬಹುದಾದ ಸಸ್ಯವಿದೆ.

ಈ ಸಾವಿರಾರು ಗಿಡಗಳನ್ನು ಕೇವಲ ಒಂದು ಎಲೆಯಿಂದ ಬೆಳೆಸಬಹುದು ಮತ್ತು ಕುತೂಹಲಕಾರಿ ಎಂದರೆ ಇದಕ್ಕೆ ಯಾವುದೇ ವಿಶೇಷ ನಿರ್ವಹಣೆ ಅಗತ್ಯವೂ ಕೂಡ ಬೇಡ.

ಈ ಸಸ್ಯವು ದೇಶದಾದ್ಯಂತ ಸ್ಟೋನ್​ಕ್ರಾಪ್​ ಅಥವಾ ವಂಡರ್​ ಪ್ಲಾಂಟ್​ ಎಂದು ಪ್ರಸಿದ್ಧವಾಗಿದೆ ಆದರೆ “ಕಲಂಚೋ ಪಿನ್ನಾಟಾ’ ಎಂಬ ವೈಜ್ಞಾನಿಕ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಇದು ಮಡಗಾಸ್ಕರ್​ ಮೂಲದ ಸಸ್ಯವಾಗಿದೆ. ಈ ಸಸ್ಯದ ಅದ್ಭುತ ಗುಣಲಕ್ಷಣಗಳು ಅದರ ಹೆಸರಿನಂತೆಯೇ ಅನನ್ಯವಾಗಿವೆ. ಸುಲಭವಾಗಿ ಬೆಳೆಯಬಹುದಾದ ಇದು ಅನೇಕ ರೋಗಗಳಿಗೆ ಔಷಧವಾಗಿದೆ.

ದೊಡ್ಡ ಎಲೆಗಳ ಅಂಚಿನಿಂದ ಸಣ್ಣ ಎಲೆಗಳು ಹೊರಬರುವುದನ್ನು ನಾವು ನೋಡಬಹುದಾಗಿದೆ. ಇದರ ವಿಡಿಯೋ ಸಹ ಲಭ್ಯವಿದೆ. ಜಾಲತಾಣದಲ್ಲಿ ನೇಚರ್​ ವಿಡಿಯೋಸ್​ ಎಂಬ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ದೊಡ್ಡ ಎಲೆಗಳಿಂದ ಸಣ್ಣ ಎಲೆಗಳನ್ನು ಬೇರ್ಪಡಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ತೋರಿಸಿದ ರೀತಿಯಲ್ಲಿಯೇ ಇವುಗಳನ್ನು ಸಂಗ್ರಹಿಸಿ ಔಷಧ ತಯಾರಿಸಲು ಬಳಸಲಾಗುತ್ತದೆ.

ಹಲವಾರು ಆರೋಗ್ಯ ಪ್ರಯೋಜನಗಳನ್ನು ಉಲ್ಲೇಖಿಸಲಾಗಿದೆ. ಬಾಯಿಯ ಆರೋಗ್ಯ ರಕ್ಷಣೆ, ಅಲಜಿರ್ಗೆ ಸಂಬಂಧಿಸಿದ ಚಿಕಿತ್ಸೆ, ಹುಣ್ಣುಗಳ ವಿರುದ್ಧ ಹೋರಾಡುವ ಗುಣ, ಕ್ಯಾನ್ಸರ್​ ಚಿಕಿತ್ಸೆಯಲ್ಲೂ ಬಳಕೆ, ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಗಳ ರಕ್ಷಕ, ಬೆನ್ನುನೋವಿನ ಉಪಶಮನ, ಪೇಯ್ನ್ ಕಿಲ್ಲರ್​, ಕಣ್ಣುಗಳಲ್ಲಿನ ಗುಳ್ಳೆ ನಿವಾರಕ, ಪಾದಗಳ ಆರೋಗ್ಯ ರಕ್ಷಣೆಗೆ, ಉತ್ತಮ ಸನ್ಬರ್ನ್​ ಚಿಕಿತ್ಸೆಗಾಗಿ, ನರಗುಳ್ಳೆಯ ಹೀಲಿಂಗ್​, ಗಾಯಗಳ ನೋವು ನಿವಾರಕ, ಸುಕ್ಕುಗಳ ತೊಡೆಯಲು, ಗಂಟಲು, ಮೂಗು ಮತ್ತು ಕಿವಿ ಇತ್ಯಾದಿ ರೋಗಗಳ ನಿವಾರಕ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...