alex Certify ಸಕಲ ದೋಷ ನಿವಾರಿಸುವ ಕಾಳಹಸ್ತಿ ದೇವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕಲ ದೋಷ ನಿವಾರಿಸುವ ಕಾಳಹಸ್ತಿ ದೇವಾಲಯ

ದಕ್ಷಿಣ ಕಾಶಿ ಎಂದೂ ಹೆಸರು ಪಡೆದಿರುವ ದೇವಾಲಯವೇ ಶ್ರೀ ಕಾಳಹಸ್ತಿ. ಈ ದೇವಾಲಯವು ಸ್ವರ್ಣಮುಖಿ ನದಿ ತೀರದಲ್ಲಿ ನೆಲೆಸಿದೆ. ಸ್ವಯಂ ಭೂ ಲಿಂಗ ಎಂದು ಕೆಲವರು, ಇನ್ನೂ ಕೆಲವರು ಬ್ರಹ್ಮ ದೇವನು ಪ್ರತಿಷ್ಠಾಪಿಸಿದ ಲಿಂಗ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಲಿಂಗದ ಮುಂಭಾಗದಲ್ಲಿರುವ ದೀಪವು ಶಿವಲಿಂಗದಿಂದ ಬರುವ ಗಾಳಿಯಿಂದ ಕದಲುತ್ತದೆ ಎನ್ನಲಾಗಿದೆ.

ಕಾಳಹಸ್ತಿ ದೇವಾಲಯವು ರಾಹು ಹಾಗೂ ಕೇತು ದೋಷವನ್ನು ಪರಿಹರಿಸುವಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಪೂಜೆ ಮಾಡಿದರೆ ಸಕಲ ದೋಷ ನಿವಾರಣೆಯಾಗಿ ಸಂತಾನ ಭಾಗ್ಯ, ವಿವಾಹ, ಉದ್ಯೋಗ, ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಆದಿ ಶಂಕರಾಚಾರ್ಯರು ಇಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು. ಈ ದೇವಾಲಯದ ಇತರ ಹೆಸರುಗಳೆಂದರೆ, ದಕ್ಷಿಣ ಕೈಲಾಸ, ಸತ್ಯ ಮಾಹಾ ಭಾಸ್ಕರಕ್ಷೇತ್ರ, ಸದಾಮುಕ್ತಿ ಕ್ಷೇತ್ರ ಇತ್ಯಾದಿ. ಶಿವರಾತ್ರಿಯ ದಿನದಂದು ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತದೆ. ಈ ದೇವಾಲಯಕ್ಕೆ ತೆರಳಿದ ನಂತರ ಮತ್ತೆ ಯಾವ ದೇವಾಲಯಕ್ಕೂ ಹೋಗಬಾರದು ಎಂಬ ನಂಬಿಕೆ ಭಕ್ತರಲ್ಲಿದೆ. ತಿರುಪತಿಯಿಂದ 30 ಕಿ,ಮೀ ದೂರದಲ್ಲಿರುವ ಕಾಳಹಸ್ತಿ ದೇವಾಲಯಕ್ಕೆ 5 ನಿಮಿಷಕ್ಕೆ ಒಮ್ಮೆ ಬಸ್ ವ್ಯವಸ್ಥೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...