alex Certify ʼಕಲ್​ ಹೋ ನಾ ಹೋʼ ಹಾಡಿದ ಅಮೆರಿಕನ್ ನೇವಿ ಬ್ಯಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಲ್​ ಹೋ ನಾ ಹೋʼ ಹಾಡಿದ ಅಮೆರಿಕನ್ ನೇವಿ ಬ್ಯಾಂಡ್

ಬಾಲಿವುಡ್​ ಸಂಗೀತ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಟ್ರೆಂಡ್​ ಆದ ಹಾಡುಗಳು ವಿದೇಶಿಯರ ಬಾಯಲ್ಲಿ ನಲಿಯುತ್ತದೆ, ಇಲ್ಲವೇ ಡ್ಯಾನ್ಸ್​ ರೂಪದಲ್ಲಾದರೂ ಪ್ರತಿಕ್ರಿಯೆಯಾಗಿ ಬರುತ್ತದೆ.

ಶಾರುಖ್​ ಖಾನ್​, ಸೈಫ್​ ಅಲಿ ಖಾನ್​ ಮತ್ತು ಪ್ರೀತಿ ಜಿಂಟಾ ಅಭಿನಯದ 2003ರಲ್ಲಿ ತೆರೆಕಂಡ ಚಲನಚಿತ್ರ ‘ಕಲ್​ ಹೋ ನಾ ಹೋ’ ಹಾಡು ಲಕ್ಷಾಂತರ ಜನರಿಗೆ ಪ್ರಿಯವಾಗಿದೆ. ಈಗಲೂ ಸಹ ಟ್ರೆಂಡ್​ನಲ್ಲಿದೆ.

ಯುಎಸ್​ ನೌಕಾಪಡೆಯ ಅಧಿಕಾರಿಗಳು ಆ ಹಾಡನ್ನು ಹಾಡಿದ್ದು, ಅದು ನಿರ್ಮಾಪಕ ಕರಣ್​ ಜೋಹರ್​ ಗಮನ ಸೆಳೆದಿದೆ. ಅವರು ತಮ್ಮ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ವಿಡಿಯೊವನ್ನು ರೀ ಪೋಸ್ಟ್​ ಮಾಡಿದ್ದಾರೆ.

ಶಾರುಖ್​ ಖಾನ್​, ನಿರ್ದೇಶಕ ನಿಖಿಲ್​ ಅಡ್ವಾಣಿ ಹಾಗೂ ಗೀತರಚನೆಕಾರ ಜಾವೇದ್​ ಅಖ್ತರ್​ ಮತ್ತು ಸಂಯೋಜಕರಾದ ಶಂಕರ್​ ಮಹಾದೇವನ್​, ಎಹ್ಸಾನ್​ ನೂರಾನಿ ಮತ್ತು ಲಾಯ್​ ಮೆಂಡೋನ್ಸಾ ಅವರನ್ನು ಟ್ಯಾಗ್​ ಮಾಡಿ, ಹಾಡು ಜೀವಂತವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಆ ಸಣ್ಣ ಕ್ಲಿಪ್​ನಲ್ಲಿಯುಎಸ್​ ನೌಕಾಪಡೆಯ ಹಲವು ಅಧಿಕಾರಿಗಳು ‘ಕಲ್​ ಹೋ ನಾ ಹೋ’ ಹಾಡುವುದು ಕಂಡುಬಂದರೆ ಕೆಲವರು ಗಿಟಾರ್​ ನುಡಿಸಿದ್ದರು.

ಯುಎಸ್​ ಕಾರ್ಯದರ್ಶಿ ನೌಕಾಪಡೆಯ ಬೋಟ್‌ನಲ್ಲಿ ಆಯೋಜಿಸಿದ್ದ ಭೋಜನದ ಸಮಯದಲ್ಲಿ ವಿಡಿಯೊವನ್ನು ರೆಕಾರ್ಡ್​ ಮಾಡಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...