alex Certify ಶಾರೂಖ್ ಗೆ ಕಾಜೋಲ್‌ ಹುಟ್ಟುಹಬ್ಬದ ಶುಭಾಶಯ ಹೇಳದಿರುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೂಖ್ ಗೆ ಕಾಜೋಲ್‌ ಹುಟ್ಟುಹಬ್ಬದ ಶುಭಾಶಯ ಹೇಳದಿರುವುದರ ಹಿಂದಿದೆ ಈ ಕಾರಣ

ಬಾಲಿವುಡ್‌ ಸಿನಿಮಾ ಜಗತ್ತಿನ ಪರದೆಯ ಮೇಲಿನ ಅತ್ಯಂತ ಜನಪ್ರಿಯ ತಾರಾ ಜೋಡಿ ಎಂದರೆ ಶಾರುಖ್‌ ಖಾನ್‌ ಮತ್ತು ಕಾಜೋಲ್‌. ಅದು ‘ದಿಲ್‌ ವಾಲೆ ದುಲ್‌ಹನಿಯಾ ಲೇ ಜಾಯೆಂಗೆ ‘ಸಿನಿಮಾದ ಭಾರಿ ಯಶಸ್ಸಿನಿಂದ ಸಾಬೀತಾಗಿದೆ ಕೂಡ. ಪ್ರೀತಿಯಲ್ಲಿ ಮುಳುಗಿದ ಯುವ ಜೋಡಿಯಾಗಿ ಪರದೆ ಮೇಲೆ ಕಾಣಿಸಿಕೊಂಡ ಅತ್ಯಂತ ಯಶಸ್ವಿ, ಪರಿಣಾಮಕಾರಿ ಜೋಡಿ ಎಂದರೆ ಶಾರೂಖ್‌-ಕಾಜೋಲ್‌ ಬಿಟ್ಟು ಬೇರೊಬ್ಬರಿಲ್ಲ. ಸಿನಿಮಾ ಹೊರತಾಗಿ ಕೂಡ ಶಾರುಖ್‌ ಮತ್ತು ಕಾಜೋಲ್‌ ಬಹಳ ಆಪ್ತ ಸ್ನೇಹಿತರು. ಹಾಗಿದ್ದು ಈ ಬಾರಿ ಶಾರುಖ್‌ ಜನ್ಮದಿನದಂದು ಕಾಜೋಲ್‌ ಶುಭಾಶಯ ಕೋರಲೇ ಇಲ್ಲವಂತೆ..!

ಈ ಬಗ್ಗೆ ಕಾಜೋಲ್‌ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಬುಧವಾರ ಸಂಜೆ ಅವರು ಅಭಿಮಾನಿಗಳ ಪ್ರಶ್ನೆಗೆ ಇನ್‌ಸ್ಟಾಗ್ರಾಂನಲ್ಲಿ ಉತ್ತರಿಸುತ್ತಿದ್ದರು. ಆ ವೇಳೆ ಅಭಿಮಾನಿಯೊಬ್ಬರು, ಯಾಕೆ ಮೇಡಂ ಶಾರುಖ್‌ ಬರ್ತಡೇಗೆ ವಿಶ್‌ ಮಾಡಲಿಲ್ಲ ಎಂದು ಕೇಳಿದರು.

ಮನುಷ್ಯರಂತೆ ನಡೆಯುತ್ತೆ ಈ ಶ್ವಾನ…! ಇದರ ಹಿಂದಿದೆ ಮನಕಲಕುವ ಕಾರಣ

ಥಟ್ಟಂತ ಉತ್ತರಿಸಿದ ಕಾಜೋಲ್‌, ’’ಆರ್ಯನ್‌ ಯಾವ ದಿನ ಜೈಲಿನಿಂದ ಮನೆಗೆ ಬಂದನೋ ಅಂದೇ ಶಾರುಖ್‌ನ ಎಲ್ಲ ಬೇಡಿಕೆಗಳು ಈಡೇರಿ ಆಗಿದೆ. ಜಗತ್ತಿನ ಎಲ್ಲ ಸಂತೋಷ ಆರ್ಯನ್‌ ರೂಪದಲ್ಲಿ ಶಾರುಖ್‌-ಗೌರಿ ದಂಪತಿಗೆ ಸಿಕ್ಕಾಗಿದೆ. ಅದರ ಹೊರತಾಗಿ ಇನ್ನೇನು ಶುಭಾಶಯ ಕೋರಲಿ?’’ ಎಂದು ಭಾವುಕವಾಗಿ ಹೇಳಿದ್ದಾರೆ. ಇದಕ್ಕೆ, ಶಾರುಖ್‌ ಹಾಗೂ ಕಾಜೋಲ್‌ ಅವರ ಲಕ್ಷಾಂತರ ಅಭಿಮಾನಿಗಳು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ಒಟಿಟಿ ವೇದಿಕೆಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕಾಜೋಲ್‌ ಅವರು, ’’ ಚಿತ್ರಮಂದಿರದಲ್ಲಿ 2-2.30 ಗಂಟೆಯೊಳಗೆ ಸಿನಿಮಾ ಮುಗಿಸಬೇಕೆಂಬ ಡೆಡ್‌ಲೈನ್‌ ಮತ್ತು ಸಿನಿಮಾಗೆ ಇಂತಿಷ್ಟೇ ಖರ್ಚು ಮಾಡಬೇಕೆನ್ನುವ ಆರ್ಥಿಕ ಇತಿಮಿತಿಗಳನ್ನು ಒಟಿಟಿ ವೇದಿಕೆಗೆ ಮೀಸಲಾದ ಸಿನಿಮಾಗಳ-ವೆಬ್‌ ಸಿರೀಸ್‌ಗಳು ಮುರಿದುಹಾಕಿವೆ. ಹೊಸ ಶಕೆ ಆರಂಭವಾಗಿದೆ. ಹಾಗಾಗಿ ಉತ್ತಮ ಕಥೆ, ಕೆಲಸ ಇರುವ ಒಟಿಟಿ ಸಿನಿಮಾಗಳಲ್ಲಿ ಖಂಡಿತ ನಟಿಸಲು ಇಷ್ಟಪಡುತ್ತೇನೆ. ಯಾವುದೇ ಕಥೆಯನ್ನು ಕೂಡ ಒಟಿಟಿಯಲ್ಲಿ ಹೇಳಲು ಅವಕಾಶವಿದೆ’’ ಎಂದು ಮನದಾಳದ ಮಾತು ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...