alex Certify ಗಂಡು ಮಗುವಿನ ತಾಯಿಯಾದ ನಟಿ ಕಾಜಲ್ ಅಗರ್ವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡು ಮಗುವಿನ ತಾಯಿಯಾದ ನಟಿ ಕಾಜಲ್ ಅಗರ್ವಾಲ್

ಬಾಲಿವುಡ್ ನಟಿ ಕಾಜಲ್ ಅಗರ್ವಾಲ್ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿ ಮಗುವಿಗೆ ನೀಲ್ ಕಿಚ್ಲು ಎಂಬ ಮುದ್ದಾದ ಹೆಸರಿಟ್ಟಿದ್ದಾರೆ.

ಕಾಜಲ್ ಅಗರ್ವಾಲ್ ಅವರ ಸಹೋದರಿ ನಿಶಾ ಅಗರ್ವಾಲ್, ಮಗುವಿನ ಹೆಸರನ್ನು ನೀಲ್ ಕಿಚ್ಲು ಎಂಬುದಾಗಿ ಇಟ್ಟಿರುವ ಬಗ್ಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಭಾವನಾತ್ಮಕ ಟಿಪ್ಪಣಿ ಬರೆದ ನಿಶಾ ಅಗರ್ವಾಲ್, ನಿನ್ನೆಯ ಮುಂಜಾನೆ ಪರಿಪೂರ್ಣವಾಗಿತ್ತು. ನಮ್ಮ ಜಗತ್ತನ್ನು ಸುಂದರಗೊಳಿಸುವ ನಮ್ಮ ಅನರ್ಘ್ಯ ರತ್ನವಾದ ಮಂಚ್ಕಿನ್ ಅನ್ನು ಸ್ವಾಗತಿಸಿದ್ದೇವೆ. ತುಂಬಾ ಸುಂದರವಾದ ನಗು, ಮಿನುಗುವ ಕಣ್ಣುಗಳು ನಮ್ಮ ದಿನವನ್ನು ಬೆಳಗಿಸುತ್ತವೆ, ಪುಟ್ಟ ಪುಟ್ಟ ಪಾದಗಳು ಮತ್ತು ಕೈಗಳು, ಅತ್ಯಂತ ಪರಿಪೂರ್ಣವಾದ ಉಗುರುಗಳು……ನೀಲ್ ಕಿಚ್ಲು ನಮ್ಮ ಜಗತ್ತಿನಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ನಮಗೆ ತುಂಬಾ ಸಂತೋಷವಾಗಿದೆ ಎಂದು ಬರೆದಿದ್ದಾರೆ.

2020 ರಲ್ಲಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ವಿವಾಹ ಜೀವನಕ್ಕೆ ಅಡಿ ಇಟ್ಟಿದ್ದರು. ಕಾಜಲ್ ಅವರ ಪತಿ ಗೌತಮ್ ತಮ್ಮ ನವಜಾತ ಶಿಶುವನ್ನು ಪ್ರೀತಿ ಮತ್ತು ಆಶೀರ್ವಾದ ಧಾರೆಯೆರೆದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಗೌತಮ್, ನಮ್ಮ ಹೃದಯಗಳು ತುಂಬಿವೆ ಮತ್ತು ನಾವು ಕೃತಜ್ಞತೆ ಸಲ್ಲಿಸುತ್ತೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...