80 ರ ದಶಕದ ಬಾಲಿವುಡ್ ನ ಸೂಪರ್ ಹಿಟ್ ಗೀತೆ ‘ಕಾಂಟಾ ಲಗಾ’ ಹಾಡು ಎಲ್ಲರೂ ಗುನುಗುವಂಥದ್ದು. ವರ್ಷಗಳೇ ಕಳೆದ್ರೂ ಈ ಗೀತೆಯು ತನ್ನ ಜನಪ್ರಿಯತೆಯನ್ನ ಉಳಿಸಿಕೊಂಡಿದೆ.
ಇದೇ ಹಾಡನ್ನ ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಕರ ಗುಂಪು ಗುನುಗಿದೆ. ಪ್ರಯಾಣಿಕರಲ್ಲಿ ಕೆಲವರು ಈ ಹಾಡು ಹೇಳುತ್ತಿದ್ದರೆ, ಕೆಲವರು ಸಂಚರಿಸುತ್ತಿರುವ ರೈಲಿನಲ್ಲೇ ಹೆಜ್ಜೆ ಹಾಕಿದ್ದಾರೆ.
ವಿಶೇಷ ಸಂಗತಿಯೆಂದರೆ ವೈರಲ್ ವಿಡಿಯೋದಲ್ಲಿ ಈ ಹಾಡು ಹಾಡಿರುವವರು ಮತ್ತು ಹೆಜ್ಜೆ ಹಾಕಿರುವವರೆಲ್ಲಾ ಮಧ್ಯ ವಯಸ್ಕರು ಹಾಗು ವೃದ್ಧರು.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ ಆಕರ್ಷಣೀಯ ಹಾಡಿಗೆ ಪುರುಷರು ಸಂತೋಷದಿಂದ ಹಾಡುವುದು ಮತ್ತು ನೃತ್ಯ ಮಾಡುವುದು ಕಂಡುಬರುತ್ತದೆ. ವೀಡಿಯೊದಲ್ಲಿರುವ ಪುರುಷರ ಸಂಪೂರ್ಣ ಉತ್ಸಾಹವು ವೀಡಿಯೊವನ್ನು ವೈರಲ್ ಮಾಡುತ್ತಿದೆ.