alex Certify ಮುಗಿಯದ ಪುಷ್ಪ ಕ್ರೇಜ್; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಬ್ಯಾಡ್ಮಿಂಟನ್ ತಾರೆ ವಿಷ್ಣು ವಿಶಾಲ್ ಅತ್ತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಗಿಯದ ಪುಷ್ಪ ಕ್ರೇಜ್; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಬ್ಯಾಡ್ಮಿಂಟನ್ ತಾರೆ ವಿಷ್ಣು ವಿಶಾಲ್ ಅತ್ತೆ…..!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪಾ ದಿ ರೈಸ್ ಈಗ ಭಾರತದಲ್ಲಿ ಮನೆಮಾತಾಗಿದೆ ಎನ್ನೋದು ಹಳೆ ವಿಚಾರ. ಈ ಚಿತ್ರದ ಕ್ರೇಜ್ ಸಂಪೂರ್ಣವಾಗಿ ಸಾಮಾಜಿಕ ಮಾಧ್ಯಮವನ್ನು ಆವರಿಸಿದೆ. ಜನರು ಪುಷ್ಪ ಚಿತ್ರದ ಪೆಪ್ಪಿ ಹಾಡುಗಳಿಗೆ ಡ್ಯಾನ್ಸ್ ರೀಲ್‌ಗಳನ್ನು ಮಾಡುತ್ತಾರೆ. ಅಲ್ಲು ಅರ್ಜುನ್ ಅವರ ಸಂಭಾಷಣೆಗಳಿಗೆ ಲಿಪ್ ಸಿಂಕ್ ಮಾಡುತ್ತಾರೆ.

ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳು ಕೂಡ ಪುಷ್ಪದ ಮೋಡಿಗೆ ಒಳಗಾಗಿದ್ದಾರೆ. ಮಂಗಳವಾರ, ಬ್ಯಾಡ್ಮಿಂಟನ್ ಆಟಗಾರ ಮತ್ತು ನಟ ವಿಷ್ಣು ವಿಶಾಲ್ ಅವರ ಪತ್ನಿ ಜ್ವಾಲಾ ಗುಟ್ಟಾ ಅವರ ತಾಯಿ ಯಲನ್ ಗುಟ್ಟಾ ಅವರು ಶ್ರೀವಲ್ಲಿ ಹಾಡಿಗೆ ಕುಣಿದಿದ್ದಾರೆ. ಈ ವಿಡಿಯೋವನ್ನು ಜ್ವಾಲಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

BIG NEWS: 80 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ; ಸ್ಥಳೀಯರಿಗೆ ಶೇ. 95 ರಷ್ಟು ಮೀಸಲಾತಿ, 10 ವರ್ಷ ವಯೋಮಿತಿ ಹೆಚ್ಚಳ

ಯಲನ್ ಟ್ರೆಂಡಿಂಗ್ ಹಾಡಿನ ಹುಕ್ಸ್ ಸ್ಟೆಪ್ ಹಾಕುವುದನ್ನ ವಿಡಿಯೋದಲ್ಲಿ ನೋಡಬಹುದು. ವಿಡಿಯೋದ ಉದ್ದಕ್ಕು ಯೆಲನ್, ನಗುತ್ತಲೆ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿರುವ ಜ್ವಾಲಾ, ಪುಷ್ಪಾ ಹುಚ್ಚು ನನ್ನ ಅಮ್ಮನಿಗೂ ಹಿಡಿದಿದೆ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಸ್ವತಃ ಅಲ್ಲು ಅರ್ಜುನ್ ಕಾಮೆಂಟ್ ಮಾಡಿದ್ದು, ಅಭಿಮಾನಿಗಳು ಕೂಡ ಯಲನ್ ಅವರನ್ನ ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...