ದೆಹಲಿಯಂಥ ಮಹಾನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ದುಸ್ತರ ಎನ್ನುವ ಸ್ಥಿತಿ ಇದೆ. ಬಹುತೇಕ ದೊಡ್ಡ ನಗರಗಳಲ್ಲೂ ಇದೆ ಸ್ಥಿತಿ. ಕೂಲಿ ಕಾರ್ಮಿಕರು, ಕಾರು-ಆಟೋ ಚಾಲಕರು, ಮೆಕ್ಯಾನಿಕ್‍ಗಳು, ಮನೆಗೆಲಸದವರು ಬಹಳ ಅಗತ್ಯವಾದರೂ ಅವರ ಜೀವನ ನಿರ್ವಹಣೆ ಮಾತ್ರ ಬಹಳ ಕಷ್ಟ.
ಅದರಲ್ಲೂ ಸ್ವಲ್ಪ ಆರೋಗ್ಯ ಕೆಟ್ಟರೆ ಸಾಕು, ದೊಡ್ಡ ಖಾಸಗಿ ಆಸ್ಪತ್ರೆಗಳಿಗೇ ತೆರಳಿ ಜೀವರಕ್ಷಣೆಗೆ ಲಕ್ಷಗಟ್ಟಲೆ ಖರ್ಚು ಮಾಡಬೇಕಾದ ಸ್ಥಿತಿ ಇದೆ.
ಇದನ್ನು ಅರಿತ ದೆಹಲಿಯಲ್ಲಿನ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಸರಕಾರ ಶುರು ಮಾಡಿದ ಮೊಹಲ್ಲಾ ಕ್ಲಿನಿಕ್‍ಗಳು ಸದ್ಯದ ಮಟ್ಟಿಗೆ ಸಾಮಾನ್ಯರ ಆಪತ್ಬಾಂಧವ ಆಗಿವೆ. ಯಾವುದೇ ಕಟ್ಟಡ ನಿರ್ಮಾಣ, ಬಾಡಿಗೆ ಸ್ಥಳಗಳ ಗೋಜಿಲ್ಲದೆಯೇ ಹಡಗುಗಳಲ್ಲಿ ಸರಕು ಹೊತ್ತೊಯ್ಯುವ ಕಂಟೇನರ್‍ಗಳಿಂದ ಈ ಕ್ಲಿನಿಕ್‍ಗಳನ್ನು ರಸ್ತೆ ಬದಿಯಲ್ಲಿ ಸ್ಥಾಪಿಸಲಾಗುತ್ತಿದೆ.
ವಿಂಬಲ್ಡನ್ ನಲ್ಲಿ ನಡೆದಿದ್ದ ತಮಾಷೆಯ ವಿಡಿಯೋ ಹಂಚಿಕೊಂಡ ಗೊಯೆಂಕಾ: ಹಳೆ ವಿಡಿಯೋ ಮತ್ತೆ ವೈರಲ್
ಬೇಕಾದಾಗ ಕ್ರೇನ್ ಮೂಲಕ ಈ ಕ್ಲಿನಿಕ್‍ಗಳನ್ನು ಸ್ಥಳಾಂತರಿಸಲೂಬಹುದು ಕೂಡ. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಶಾಕುರ್ ಬಸ್ತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಲಾದ ಈ ಕಂಟೇನರ್ ಕ್ಲಿನಿಕ್‍ಗಳು “ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್’ ಭಾರಿ ಜನಪ್ರಿಯವಾಗಿವೆ.