ನ್ಯೂಸ್ ಚಾನಲ್ ಆ್ಯಂಕರ್ ಲೈವ್ ನ್ಯೂಸ್ ಕೊಡುತ್ತಿದ್ದಾಗ ನೊಣ ನುಂಗಿ ಸುದ್ದಿಯಾಗಿದ್ದಾರೆ.
ಪತ್ರಕರ್ತೆ ಫರಾ ನಾಸರ್ ನ್ಯೂಸ್ ಓದುತ್ತಿದ್ದಾಗ ನೊಣ ಬಾಯಿಯತ್ತ ಬಂದ್ದಿದ್ದು, ಬಾಯಿಯೊಳಗೂ ದಾಟಿತು. ಆಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅದನ್ನು ನುಂಗಿ ಸುದ್ದಿ ಓದುವುದನ್ನು ಮುಂದುವರಿಸಿದ್ದಾರೆ.
ಫರಾ ಅದನ್ನು ಹಾಸ್ಯವಾಗಿ ತೆಗೆದುಕೊಂಡು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ತನ್ನ ನೇರ ಪ್ರಸಾರದ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಒಂದು ಲಕ್ಷ ವೀಕ್ಷಣೆ ಕಂಡಿದೆ.
ಪಾಕಿಸ್ತಾನದಲ್ಲಿ ಮಳೆಯು ಹೇಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ನಾಸರ್ ವರದಿ ಮಾಡುತ್ತಿದ್ದಾಗ ಅವಳ ಬಾಯಿಯತ್ತ ನೊಣ ಬಂದಿದೆ. ಪಾಕಿಸ್ತಾನವು ಈ ರೀತಿಯ ಮಾನ್ಸೂನ್ ಹಾವಳಿ ನೋಡಿಲ್ಲ. ಎಂಟು ವಾರಗಳು ನಿಲ್ಲದ ಧಾರಾಕಾರ ಮಳೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಪಾಕಿಸ್ತಾನದ ಬಗ್ಗೆ ವರದಿ ಮಾಡುವಾಗ ಬಾಯಿಯೊಳಗೆ ನೊಣ ಹಾರಿತು. ಅನಿವಾರ್ಯವಾಗಿ ಆಕೆ ನುಂಗಲೇ ಬೇಕಾಯಿತು.
ಆ ಸಂದರ್ಭದಲ್ಲಿ ಆಕೆ ತನ್ನ ವೀಕ್ಷಕರಿಗೆ ಏನಾಯಿತು ಎಂಬುದನ್ನು ತಿಳಿಸಲಿಲ್ಲ ಮತ್ತು ತನ್ನ ಕೆಲಸ ಮುಂದುವರಿಸಿದರು.
ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಆಕೆಯ ಸಹೋದ್ಯೋಗಿಗಳು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಪ್ರಶಂಸಿಸಿದ್ದಾರೆ.