alex Certify ವಿಶ್ವವಿಖ್ಯಾತ ಜೋಗ ಜಲಪಾತ ನೋಡ ಬಯಸುವವರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವವಿಖ್ಯಾತ ಜೋಗ ಜಲಪಾತ ನೋಡ ಬಯಸುವವರಿಗೆ ಗುಡ್ ನ್ಯೂಸ್

ದಾವಣಗೆರೆ: ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಸಾರ್ವಜನಿಕರು ವೀಕ್ಷಿಸುವಂತಾಗಲು ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರದಿಂದ ಜೋಗ್‍ಫಾಲ್ಸ್‍ ಗೆ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆ. 1 ರಿಂದ ವಾರದ ಎಲ್ಲಾ ದಿನಗಳಂದು ಇರುತ್ತದೆ.

ಭಾನುವರದಂದು ಮಾತ್ರ ಈ ಸೇವೆ ಪ್ರಾರಂಭಿಸಲಾಗಿತ್ತು. ಆದರೆ, ಈ ಪ್ಯಾಕೇಜ್ ಪ್ರಯಾಣಕ್ಕೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಬಂದ ಕಾರಣ ಆ.1 ರಿಂದ ವಾರದ ಎಲ್ಲಾ ದಿನಗಳಂದು ಬಸ್ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ.

ದಾವಣಗೆರೆಯಿಂದ ಬೆಳಿಗ್ಗೆ 7 ಕ್ಕೆ ಹೊರಟು, ಹರಿಹರ 7-30, ಶಿರಸಿ- ಬೆ. 10.30 ಕ್ಕೆ ತಲುಪುತ್ತದೆ. 12 ಕ್ಕೆ ಶಿರಸಿಯಿಂದ ಹೊರಟು ಮಧ್ಯಾಹ್ನ 1.30 ಕ್ಕೆ ಜೋಗವನ್ನು ತಲುಪುತ್ತದೆ.  ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆಯನ್ನು ತಲುಪುತ್ತದೆ. ಪ್ರಯಾಣ ದರ 500 ರೂ. (ಹೋಗಿ ಬರುವ 2 ಬದಿ ಸೇರಿ) ಮಕ್ಕಳಿಗೆ 375 ರೂ.(2 ಬದಿಯಿಂದ) ಹರಿಹರದಿಂದ ಹೊರಡುವ ಪ್ರಯಾಣಿಕರಿಗೆ ದರ 475 ರೂ. (2 ಬದಿ) ಮಕ್ಕಳಿಗೆ  350 ರೂ. ಆಗಿರುತ್ತದೆ.

ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್  www.ksrtc.in   ಮಾಡಲು ಸೌಕರ್ಯ ಕಲ್ಪಿಸಲಾಗಿದೆ ಎಂದು ದಾವಣಗೆರೆ ಕ.ರಾ.ರ.ಸಾ. ನಿಗಮ. ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...