alex Certify ತಂದೆಗೆ ಕರೆ ಮಾಡಿ ಹೋಟೆಲ್‌ ನ 6 ನೇ ಮಹಡಿಯಿಂದ ಹಾರಿದ ಮಾಡೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಗೆ ಕರೆ ಮಾಡಿ ಹೋಟೆಲ್‌ ನ 6 ನೇ ಮಹಡಿಯಿಂದ ಹಾರಿದ ಮಾಡೆಲ್

ರಾಜಸ್ಥಾನದ ಜೋಧಪುರದಲ್ಲಿ 19 ವರ್ಷದ ಮಾಡೆಲ್​ ಹೋಟೆಲ್​ ಟೆರೇಸ್​ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆಯು ವರದಿಯಾಗಿದೆ.

ಶನಿವಾರ ರಾತ್ರಿಯ ವೇಳೆಗೆ ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗುನ್​ಗುನ್​ ಉಪಾಧ್ಯಾಯ ಎಂಬ ರೂಪದರ್ಶಿಯು ಶನಿವಾರದಂದು ಉದಯಪುರದಿಂದ ಜೋಧಪುರಕ್ಕೆ ಮರಳಿದ್ದರು ಎನ್ನಲಾಗಿದೆ.

ಜೋಧಪುರ ಹೋಟೆಲ್​​ ಲಾರ್ಡ್ಸ್​​ ಇನ್​​ನಲ್ಲಿ ಗುನ್​​ಗುನ್​​ ಉಪಾಧ್ಯಾಯ ಇದ್ದರು ಎನ್ನಲಾಗಿದೆ. ಈ ಕಠಿಣ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಗುನ್​​ಗುನ್​ ತನ್ನ ತಂದೆಗೆ ಫೋನ್​ ಮಾಡಿ ತನ್ನ ಮುಖವನ್ನು ನೋಡುವಂತೆ ಹೇಳಿದ್ದರು ಎನ್ನಲಾಗಿದೆ.

ಇದರಿಂದ ಆತಂಕಗೊಂಡ ತಂದೆಯು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ಕೂಡಲೇ ಪೊಲೀಸರು ಜೋಧಪುರ ಹೋಟೆಲ್​​ಗೆ ತೆರಳಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಾಡೆಲ್​​ ಗುನ್​​ಗುನ್​ ಹೋಟೆಲ್​ನ ಆರನೇ ಮಹಡಿಯಿಂದ ಹಾರಿದ್ದರು.

ಗುನ್​ಗುನ್​ ಉಪಧ್ಯಾಯರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಸೂಕ್ತವಾದ ತನಿಖೆ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...