alex Certify ಭರ್ಜರಿ ಗುಡ್​ ನ್ಯೂಸ್​: 10ನೇ ತರಗತಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್​ ನ್ಯೂಸ್​: 10ನೇ ತರಗತಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ

ಉದ್ಯೋಗಕ್ಕಾಗಿ ಅರಸುತ್ತಿರುವ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ ನ್ಯೂಸ್​ ಇದೆ.

ನ್ಯೂಕ್ಲಿಯರ್​ ಪವರ್ ಕಾರ್ಪೋರೇಷನ್​ ಆಫ್​ ಇಂಡಿಯಾ 10ನೇ ತರಗತಿ ಪಾಸ್​ ಆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಎನ್​ಪಿಸಿಐಎಲ್​ನ ಅಧಿಕೃತ ವೆಬ್​ಸೈಟ್​ npcilcareers.co.in.ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ನೋಟಿಫಿಕೇಶನ್​​ನಲ್ಲಿ ಇರುವ ಮಾಹಿತಿಯ ಪ್ರಕಾರ ಫಿಟ್ಟರ್​, ಟರ್ನರ್, ಮೆಕ್ಯಾನಿಸ್ಟ್​, ಎಲೆಕ್ಟ್ರೀಷಿಯನ್​ ಸೇರಿದಂತೆ ಒಟ್ಟು 107 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ :

ಫಿಟ್ಟರ್​ – 30

ಟರ್ನರ್​ -01

ಮೆಕ್ಯಾನಿಸ್ಟ್​ – 04

ಎಲೆಕ್ಟ್ರೀಷಿಯನ್​​ – 30

ಎಲೆಕ್ಟ್ರಾನಿಕ್​ ಮೆಕಾನಿಕ್​ – 30

ವೆಲ್ಡರ್​ -04

ಕಂಪ್ಯೂಟರ್​ ಆಪರೇಟರ್​ ಹಾಗೂ ಪ್ರೋಗ್ರಾಮಿಂಗ್​ ಅಸಿಸ್ಟಂಟ್​ – 05

ಒಟ್ಟು ಖಾಲಿ ಇರುವ ಹುದ್ದೆಗಳು – 107

ವಿದ್ಯಾರ್ಹತೆ :

10ನೇ ತರಗತಿ ಉತ್ತೀರ್ಣರಾಗುವ ಜೊತೆಗೆ ಐಟಿಐ ಕೋರ್ಸ್ ಮಾಡಿರುವುದು ಅವಶ್ಯಕವಾಗಿದೆ.

ವಯಸ್ಸಿನ ಮಿತಿ :

14 ರಿಂದ 24 ವರ್ಷದೊಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ…?

http://www.apprenticeship.org/ ಅಥವಾ https://apprenticeship.gov.in/ ವೆಬ್​ಸೈಟ್​ಗೆ ಭೇಟಿ ನೀಡಿ, ರಿಜಿಸ್ಟರ್​ ಮಾಡಿ
ನಿಮಗೆ ಈಗ ರಿಜಿಸ್ಟರ್​ ಸಂಖ್ಯೆ ಸಿಗಲಿದೆ.

ಇದಾದ ಬಳಿಕ https://www.npcilcareers.co.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...