ಉದ್ಯೋಗಕ್ಕಾಗಿ ಅರಸುತ್ತಿರುವ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.
ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ 10ನೇ ತರಗತಿ ಪಾಸ್ ಆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಎನ್ಪಿಸಿಐಎಲ್ನ ಅಧಿಕೃತ ವೆಬ್ಸೈಟ್ npcilcareers.co.in.ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ನೋಟಿಫಿಕೇಶನ್ನಲ್ಲಿ ಇರುವ ಮಾಹಿತಿಯ ಪ್ರಕಾರ ಫಿಟ್ಟರ್, ಟರ್ನರ್, ಮೆಕ್ಯಾನಿಸ್ಟ್, ಎಲೆಕ್ಟ್ರೀಷಿಯನ್ ಸೇರಿದಂತೆ ಒಟ್ಟು 107 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ :
ಫಿಟ್ಟರ್ – 30
ಟರ್ನರ್ -01
ಮೆಕ್ಯಾನಿಸ್ಟ್ – 04
ಎಲೆಕ್ಟ್ರೀಷಿಯನ್ – 30
ಎಲೆಕ್ಟ್ರಾನಿಕ್ ಮೆಕಾನಿಕ್ – 30
ವೆಲ್ಡರ್ -04
ಕಂಪ್ಯೂಟರ್ ಆಪರೇಟರ್ ಹಾಗೂ ಪ್ರೋಗ್ರಾಮಿಂಗ್ ಅಸಿಸ್ಟಂಟ್ – 05
ಒಟ್ಟು ಖಾಲಿ ಇರುವ ಹುದ್ದೆಗಳು – 107
ವಿದ್ಯಾರ್ಹತೆ :
10ನೇ ತರಗತಿ ಉತ್ತೀರ್ಣರಾಗುವ ಜೊತೆಗೆ ಐಟಿಐ ಕೋರ್ಸ್ ಮಾಡಿರುವುದು ಅವಶ್ಯಕವಾಗಿದೆ.
ವಯಸ್ಸಿನ ಮಿತಿ :
14 ರಿಂದ 24 ವರ್ಷದೊಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ…?
http://www.apprenticeship.org/ ಅಥವಾ https://apprenticeship.gov.in/ ವೆಬ್ಸೈಟ್ಗೆ ಭೇಟಿ ನೀಡಿ, ರಿಜಿಸ್ಟರ್ ಮಾಡಿ
ನಿಮಗೆ ಈಗ ರಿಜಿಸ್ಟರ್ ಸಂಖ್ಯೆ ಸಿಗಲಿದೆ.
ಇದಾದ ಬಳಿಕ https://www.npcilcareers.co.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ