ಇಡೀ ಜಗತ್ತು ಕೃತಕ ಬುದ್ಧಿಮತ್ತೆ AI ಮೇಲೆ ಕೆಲಸ ಮಾಡುತ್ತಿದೆ. ಆದರೆ ಹೊಸ ತಂತ್ರಜ್ಞಾನ ಉದ್ಯೋಗಿಗಳಲ್ಲಿ ಭಯಹುಟ್ಟಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕುರಿತು ವರದಿಯನ್ನು ಮಂಡಿಸಿದ್ದಾರೆ. ಎಐ ಬಂದ್ಮೇಲೆ ಉದ್ಯೋಗದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಎಐ ಆಗಮನದಿಂದ ಕೆಲವು ಉದ್ಯೋಗಗಳು ಅಪಾಯಕ್ಕೆ ಸಿಲುಕಬಹುದು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಎಐನಿಂದ ಕೆಲವು ಪ್ರದೇಶಗಳಲ್ಲಿ ಉದ್ಯೋಗದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಅದೇ ಸಮಯದಲ್ಲಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರಲಿದೆ ಎಂದುವರು ಹೇಳಿದ್ದಾರೆ.
ಈ ಬಗ್ಗೆ ನಡೆದ ಸಮೀಕ್ಷೆ ವರದಿಯಲ್ಲಿ ತಂತ್ರಜ್ಞಾನವನ್ನು ನಿರ್ಲಕ್ಷಿಸಲಾಗುವುದಿಲ್ಲ. ಅದರ ಆಗಮನದ ನಂತ್ರ ಪ್ರತಿಯೊಂದು ಕ್ಷೇತ್ರದಲ್ಲೂ ಬೆಳವಣಿಗೆಯಾಗಲಿದೆ. ಉದ್ಯೋಗದ ಬಗ್ಗೆ ಪ್ರಶ್ನೆ ಏಳಲಿದೆ ಎಂದಿದೆ. ಟೆಕ್ ದೈತ್ಯವಾದ ಗೂಗಲ್ ಮತ್ತು ಮೈಕ್ರೋಸಾಫ್ಟ್ ಕೂಡ ಎಐ ನಲ್ಲಿ ಕೆಲಸ ಮಾಡುತ್ತಿದೆ.