ಬೆಂಗಳೂರು: ವಿವಾಹಿತ ಪುತ್ರಿಗೂ ಅನುಕಂಪದ ನೌಕರಿ ನೀಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಅಕಾಲಿಕವಾಗಿ ನಿಧನರಾದ ಸಂದರ್ಭದಲ್ಲಿ ಅನುಕಂಪದ ಕೆಲಸವನ್ನು ಮದುವೆಯಾದ ಮಗಳಿಗೂ ನೀಡಬಹುದು.
ಮೃತರ ಪತಿ ಅಥವಾ ಪತ್ನಿ ಸೂಚಿಸುವ ವಿವಾಹಿತ ಅಥವಾ ವಿಚ್ಛೇದಿತ ಮಗಳಿಗೆ ಕೆಲಸ ನೀಡಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಅವಿವಾಹಿತರಾಗಿದ್ದರೆ ಅವರ ತಂದೆ, ತಾಯಿ ಸೂಚಿಸಿದ ಸಹೋದರ, ಸಹೋದರಿ ನೇಮಕ ಮಾಡಬಹುದು. ಪೋಷಕರು ಮೃತಪಟ್ಟಿದ್ದಲ್ಲಿ ವಯಸ್ಸಿನ ಆಧಾರದ ಮೇಲೆ ಹಿರಿಯ ಸೋದ, ಸೋದರಿಗೆ ಕೆಲಸ ನೀಡಬಹುದು ಎಂದು ಹೇಳಲಾಗಿದೆ.