alex Certify ಅಮಿತ್ ಶಾ ಜಮ್ಮು ಭೇಟಿಗೆ ಮುನ್ನ ಬೆಚ್ಚಿ ಬೀಳಿಸುವ ಘಟನೆ: ಕತ್ತು ಸೀಳಿ ಡಿಜಿಪಿ ಹತ್ಯೆ; ಇದು ಸಣ್ಣ ಗಿಫ್ಟ್ ಎಂದ ಉಗ್ರ ಸಂಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಿತ್ ಶಾ ಜಮ್ಮು ಭೇಟಿಗೆ ಮುನ್ನ ಬೆಚ್ಚಿ ಬೀಳಿಸುವ ಘಟನೆ: ಕತ್ತು ಸೀಳಿ ಡಿಜಿಪಿ ಹತ್ಯೆ; ಇದು ಸಣ್ಣ ಗಿಫ್ಟ್ ಎಂದ ಉಗ್ರ ಸಂಘಟನೆ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಮೊದಲೇ ಜಮ್ಮು ಮತ್ತು ಕಾಶ್ಮೀರ ಕಾರಾಗೃಹಗಳ ಡಿಜಿಪಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಭಯೋತ್ಪಾದಕ ಗುಂಪು PAFF ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಮ್ಮುವಿನ ನಿವಾಸದಲ್ಲಿಯೇ ಲೋಹಿಯಾ ಶವವಾಗಿ ಪತ್ತೆಯಾಗಿದ್ದಾರೆ. ಉಗ್ರ ಸಂಘಟನೆ ಲೋಹಿಯಾ ಹತ್ಯೆಯ ಹೊಣೆ ಹೊತ್ತುಕೊಂಡಿದೆ.

ಪೀಪಲ್ಸ್ ಆಂಟಿ ಫ್ಯಾಸಿಸ್ಟ್ ಫೋರ್ಸ್ ಡಿಜಿಪಿ ಹತ್ಯೆ ಹೊಣೆಯನ್ನು ಹೊತ್ತುಕೊಂಡಿದೆ. ಜಮ್ಮು ಮತ್ತು ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಣ್ಣ ಉಡುಗೊರೆ ಇದು ಎಂದು ಸಂಘಟನೆ ಹೇಳಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...