alex Certify GOOD NEWS: ಜಿಯೋದಿಂದ ಅಮರನಾಥ ದೇಗುಲದ ವರ್ಚುವಲ್ ದರ್ಶನಕ್ಕೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಜಿಯೋದಿಂದ ಅಮರನಾಥ ದೇಗುಲದ ವರ್ಚುವಲ್ ದರ್ಶನಕ್ಕೆ ಅವಕಾಶ

ಕೋವಿಡ್​ ಕಾರಣದಿಂದಾಗಿ ಈ ವರ್ಷ ಅಮರನಾಥ ಯಾತ್ರೆ ರದ್ದುಗೊಂಡಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಭಕ್ತರಿಗೆ ಮನೆಯಲ್ಲೇ ಕೂತು ಅಮರನಾಥನ ದರ್ಶನ ಪಡೆಯಲು ರಿಲಯನ್ಸ್​ ಜಿಯೋ ಅವಕಾಶ ಮಾಡಿಕೊಟ್ಟಿದೆ.

ಜಿಯೋ ಟಿವಿ ಲೈವ್​ ಸ್ಟ್ರೀಮಿಂಗ್ ಮೂಲಕ ಅಮರನಾಥ ವರ್ಚುವಲ್​ ದರ್ಶನ ಹಾಗೂ ಆರತಿಯನ್ನ ಕಣ್ತುಂಬಿಕೊಳ್ಳಬಹುದಾಗಿದೆ . ಈ ಮೂಲಕ ಲಕ್ಷಗಟ್ಟಲೇ ಭಕ್ತರಿಗೆ ರಿಲಯನ್ಸ್​ ಜಿಯೋ ದೇವರ ದರ್ಶನದ ಭಾಗ್ಯ ಕಲ್ಪಿಸಿದಂತಾಗಿದೆ.

ಕೊರೊನಾ ಕಾರಣದಿಂದಾಗಿ 2021ನೇ ಸಾಲಿನ ಅಮರನಾಥಯಾತ್ರೆಯನ್ನ ಶ್ರೀ ಅಮರನಾಥ ದೇಗುಲದ ಆಡಳಿತ ಮಂಡಲಿ ರದ್ದು ಮಾಡಿತ್ತು. ಈ ಕಾರಣದಿಂದಾಗಿ ಭಕ್ತರಿಗೆ ಹಿಂದೂಗಳ ಪವಿತ್ರಯಾತ್ರೆ ಮಿಸ್​ ಆದಂತಾಗಿತ್ತು.

ಆದರೆ ಈ ಕಠಿಣ ಸಂದರ್ಭದಲ್ಲಿಯೂ ಭಕ್ತರಿಗೆ ಈ ಪವಿತ್ರ ಯಾತ್ರೆಯ ದರ್ಶನ ಭಾಗ್ಯ ಸಿಗದೇ ಹೋಗಬಾರದು ಎಂಬ ಕಾರಣಕ್ಕೆ ಜಿಯೋ ಡಿಜಿಟಲ್​ ಲೈಫ್​ ಪ್ರಾಯೋಜಕತ್ವದಲ್ಲಿ ಜಿಯೋ ಟಿವಿಯಲ್ಲಿ ವರ್ಚುವಲ್​ ಪೂಜೆ, ಹವನ ಹಾಗೂ ದರ್ಶನ ಭಾಗ್ಯ ಸಿಗಲಿದೆ.

ಇದು ಮಾತ್ರವಲ್ಲದೇ ಜಿಯೋ ಕಂಪನಿಯ ಮ್ಯೂಸಿಕ್​ ಅಪ್ಲಿಕೇಶನ್​ ಆದ ಜಿಯೋ ಸಾವನ್​ನಲ್ಲಿ ಅಮರನಾಥನ ಭಕ್ತಿಗೀತೆಗಳ ಪಟ್ಟಿಯೊಂದನ್ನ ಸಿದ್ಧಪಡಿಸಲಾಗಿದೆ. ಜಿಯೋ ಟಿವಿಯಲ್ಲಿ ಅಮರನಾಥನ ದೃಶ್ಯ ವೈಭವವನ್ನ ಪ್ರಸಾರ ಮಾಡುವ ಸಲುವಾಗಿ ಜಿಯೋ ಟಿವಿಯಲ್ಲಿ ಶ್ರೀ ಅಮರನಾಥ ದೇವಸ್ಥಾನ ಮಂಡಳಿಯ ದರ್ಶನ ಚಾನೆಲ್​ನ್ನು ಪರಿಚಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...