ಕೋವಿಡ್ ಕಾರಣದಿಂದಾಗಿ ಈ ವರ್ಷ ಅಮರನಾಥ ಯಾತ್ರೆ ರದ್ದುಗೊಂಡಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಭಕ್ತರಿಗೆ ಮನೆಯಲ್ಲೇ ಕೂತು ಅಮರನಾಥನ ದರ್ಶನ ಪಡೆಯಲು ರಿಲಯನ್ಸ್ ಜಿಯೋ ಅವಕಾಶ ಮಾಡಿಕೊಟ್ಟಿದೆ.
ಜಿಯೋ ಟಿವಿ ಲೈವ್ ಸ್ಟ್ರೀಮಿಂಗ್ ಮೂಲಕ ಅಮರನಾಥ ವರ್ಚುವಲ್ ದರ್ಶನ ಹಾಗೂ ಆರತಿಯನ್ನ ಕಣ್ತುಂಬಿಕೊಳ್ಳಬಹುದಾಗಿದೆ . ಈ ಮೂಲಕ ಲಕ್ಷಗಟ್ಟಲೇ ಭಕ್ತರಿಗೆ ರಿಲಯನ್ಸ್ ಜಿಯೋ ದೇವರ ದರ್ಶನದ ಭಾಗ್ಯ ಕಲ್ಪಿಸಿದಂತಾಗಿದೆ.
ಕೊರೊನಾ ಕಾರಣದಿಂದಾಗಿ 2021ನೇ ಸಾಲಿನ ಅಮರನಾಥಯಾತ್ರೆಯನ್ನ ಶ್ರೀ ಅಮರನಾಥ ದೇಗುಲದ ಆಡಳಿತ ಮಂಡಲಿ ರದ್ದು ಮಾಡಿತ್ತು. ಈ ಕಾರಣದಿಂದಾಗಿ ಭಕ್ತರಿಗೆ ಹಿಂದೂಗಳ ಪವಿತ್ರಯಾತ್ರೆ ಮಿಸ್ ಆದಂತಾಗಿತ್ತು.
ಆದರೆ ಈ ಕಠಿಣ ಸಂದರ್ಭದಲ್ಲಿಯೂ ಭಕ್ತರಿಗೆ ಈ ಪವಿತ್ರ ಯಾತ್ರೆಯ ದರ್ಶನ ಭಾಗ್ಯ ಸಿಗದೇ ಹೋಗಬಾರದು ಎಂಬ ಕಾರಣಕ್ಕೆ ಜಿಯೋ ಡಿಜಿಟಲ್ ಲೈಫ್ ಪ್ರಾಯೋಜಕತ್ವದಲ್ಲಿ ಜಿಯೋ ಟಿವಿಯಲ್ಲಿ ವರ್ಚುವಲ್ ಪೂಜೆ, ಹವನ ಹಾಗೂ ದರ್ಶನ ಭಾಗ್ಯ ಸಿಗಲಿದೆ.
ಇದು ಮಾತ್ರವಲ್ಲದೇ ಜಿಯೋ ಕಂಪನಿಯ ಮ್ಯೂಸಿಕ್ ಅಪ್ಲಿಕೇಶನ್ ಆದ ಜಿಯೋ ಸಾವನ್ನಲ್ಲಿ ಅಮರನಾಥನ ಭಕ್ತಿಗೀತೆಗಳ ಪಟ್ಟಿಯೊಂದನ್ನ ಸಿದ್ಧಪಡಿಸಲಾಗಿದೆ. ಜಿಯೋ ಟಿವಿಯಲ್ಲಿ ಅಮರನಾಥನ ದೃಶ್ಯ ವೈಭವವನ್ನ ಪ್ರಸಾರ ಮಾಡುವ ಸಲುವಾಗಿ ಜಿಯೋ ಟಿವಿಯಲ್ಲಿ ಶ್ರೀ ಅಮರನಾಥ ದೇವಸ್ಥಾನ ಮಂಡಳಿಯ ದರ್ಶನ ಚಾನೆಲ್ನ್ನು ಪರಿಚಯಿಸಲಾಗಿದೆ.