alex Certify ಅಗ್ಗದ ಜಿಯೋ ಸ್ಮಾರ್ಟ್ಫೋನ್ ಮೇಲೆ ಸಿಗ್ತಿದೆ ಭರ್ಜರಿ ರಿಯಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ಜಿಯೋ ಸ್ಮಾರ್ಟ್ಫೋನ್ ಮೇಲೆ ಸಿಗ್ತಿದೆ ಭರ್ಜರಿ ರಿಯಾಯಿತಿ

ರಿಲಯನ್ಸ್ ಜಿಯೋದ ಅಗ್ಗದ 4ಜಿ ಸ್ಮಾರ್ಟ್‌ಫೋನ್ ಜಿಯೋ ಫೋನ್ ನೆಕ್ಸ್ಟ್ ಈಗ ಮಾರಾಟಕ್ಕೆ ಲಗ್ಗೆಯಿಡ್ತಿದೆ. ಗ್ರಾಹಕರು ಈ ಅಗ್ಗದ 4G ಫೋನನ್ನು, ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್‌ನಿಂದ ಖರೀದಿಸಬಹುದು, ಜಿಯೋ ಫೋನ್ ನೆಕ್ಸ್ಟ್ ಬೆಲೆ 6,499 ರೂಪಾಯಿ. ಆದ್ರೆ ಫೋನ್ ಮೇಲೆ ಸಾಕಷ್ಟು ರಿಯಾಯಿತಿ ಲಭ್ಯವಿದೆ.

ಗ್ರಾಹಕರು ಈ ಫೋನ್‌ಗಳನ್ನುಎಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಮೂಲಕ ಖರೀದಿಸಿದ್ರೆ ಹೆಚ್ಚುವರಿ ಶೇಕಡಾ 5ರಷ್ಟು ರಿಯಾಯಿತಿ ಸಿಗಲಿದೆ. ಗ್ರಾಹಕರು ಇದರ ಮೇಲೆ 324 ರೂಪಾಯಿಗಳ ಹೆಚ್ಚುವರಿ ರಿಯಾಯಿತಿ ಪಡೆಯುತ್ತಾರೆ. ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್‌ಗೆ ಶೇಕಡಾ 7.5ರಷ್ಟು ರಿಯಾಯಿತಿ ಸಿಗಲಿದ್ದು, 487 ರೂಪಾಯಿ ಕಡಿಮೆಯಾಗಲಿದೆ.

ಇನ್ನು ಯೆಸ್ ಬ್ಯಾಂಕ್ ಕೂಡ ರಿಯಾಯಿತಿ ನೀಡ್ತಿದೆ. ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಗರಿಷ್ಠ ಶೇಕಡಾ 10ರಷ್ಟು ರಿಯಾಯಿತಿ ಸಿಗ್ತಿದೆ. ಫೋನ್ ಮೇಲೆ ಒಂದು ವರ್ಷದ ವಾರಂಟಿ ಲಭ್ಯವಿದೆ.

ಜಿಯೋ ಫೋನ್ ನೆಕ್ಸ್ಟ್ ಖರೀದಿದಾರರು ಬೆಲೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇಎಂಐ ಮೂಲಕ ಫೋನ್ ಖರೀದಿ ಮಾಡಬಹುದು. ಮೊದಲ ಕಂತಾಗಿ 305.90  ರೂಪಾಯಿ ಪಾವತಿಸಿ, ಫೋನ್ ಖರೀದಿಸಬಹುದು.

ಜಿಯೋ ಫೋನ್‌ನಲ್ಲಿ 13 ಮೆಗಾಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದ್ದು, ಮುಂಭಾಗದ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಹೊಂದಿದೆ. ಫೋನ್ 2 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಹೊಂದಿದೆ. ಕಾರ್ಡ್ ಮೂಲಕ ಅದನ್ನು 512 ಜಿಬಿವರೆಗೆ ವಿಸ್ತರಿಸಬಹುದು. ಎರಡು ನ್ಯಾನೋ ಸಿಮ್ ಗಳನ್ನು ನೀವು ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...