ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಈ ಬಾರಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಇನ್ನು ಈ ಪ್ರದರ್ಶನದಲ್ಲಿ ಕಂಡ ಅತೀದೊಡ್ಡ ಜಿಯೋಬೂತ್ ಎಲ್ಲರ ಗಮನ ಸೆಳೆದಿದೆ. ಬೂತ್ನಲ್ಲಿದ್ದ ವಿವಿಧ ಡೆಮೋಗಳಲ್ಲಿ ಜಿಯೋಗ್ಲಾಸ್ ಎಲ್ಲರ ಆಕರ್ಷಣೆಯಾಗಿದೆ. ಭಾರತೀಯ ಕಂಪನಿಯಿಂದ ಈ ವರ್ಷ ಹೊರಬಂದ ಅತ್ಯಾಕರ್ಷಕ ಉತ್ಪನ್ನಗಳಲ್ಲಿ ಇದು ಒಂದಾಗಿದೆ.
ಈ ಸ್ಮಾರ್ಟ್ ಗ್ಲಾಸ್ನ್ನು ಮೊಬೈಲ್ನೊಂದಿಗೆ ಕನೆಕ್ಟ್ ಮಾಡಬಹುದಾಗಿದೆ. ಈ ಮೂಲಕ ಮೊಬೈಲ್ ಸ್ಕ್ರೀನ್ನ್ನು ಈ 100 ಇಂಚಿನ ವರ್ಚುವಲ್ ಸ್ಕ್ರೀನ್ನಲ್ಲಿ ಕಾಣಬಹುದಾಗಿದೆ.
JioGlass 2019 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸ್ವಾಧೀನಪಡಿಸಿಕೊಂಡಿರುವ ಡೀಪ್-ಟೆಕ್ ಸ್ಟಾರ್ಟ್ಅಪ್ ಟೆಸ್ಸೆರಾಕ್ಟ್‌ನ ಉತ್ಪನ್ನವಾಗಿದೆ. ಸ್ಮಾರ್ಟ್ ಕನ್ನಡಕ. JioGlass ಅವರ ಪ್ರಮುಖ ಉತ್ಪನ್ನವಾಗಿದೆ ಮತ್ತು ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನವನ್ನು ಬೆಂಬಲಿಸಲು ಭಾರತದಲ್ಲಿ ಹೆಮ್ಮೆಯಿಂದ ತಯಾರಿಸಲಾಗುತ್ತದೆ.
ಈ ಕನ್ನಡಕವು ಕೇವಲ 69 ಗ್ರಾಂ ತೂಕವನ್ನು ಹೊಂದಿದೆ. ಎರಡು ಲೆನ್ಸ್ ಹೊಂದಿರುವ ಈ ಕನ್ನಡಕದ ಮೂಲಕ ನೀವು ಮೊಬೈಲ್ ಸ್ಕ್ರೀನ್ನ್ನು ಸಂಪೂರ್ಣವಾಗಿ ಕಾಣಬಹುದಾಗಿದೆ. ಇದು ನಿಮಗೆ ಒಂದು ರೀತಿಯಲ್ಲಿ ತ್ರಿಡಿ ಅನುಭವವನ್ನು ನೀಡುತ್ತದೆ.
ಹೊರ ಜಗತ್ತಿನ ಅರಿವೇ ಇಲ್ಲದಂತೆ ನೀವು ಮೊಬೈಲ್ ಸ್ಕ್ರೀನ್ನ್ನು ನೋಡಬಹುದಾಗಿದೆ. ಇದು ಸಿನಿಮಾಗಳಂತಹ ಮನರಂಜನೆಯ ವಿಡಿಯೋಗಳನ್ನು ನೋಡಲು ಅತ್ಯಂತ ಉಪಯುಕ್ತವಾಗಿದೆ. ನೀವು ಸಂಪೂರ್ಣ ಸ್ಕ್ರೀನ್ನಲ್ಲಿಯೇ ತಲ್ಲೀನರಾಗೋದ್ರಿಂದ ವಿದ್ಯಾರ್ಥಿಗಳು ಡಿಜಿಟಲ್ ಕ್ಲಾಸ್ಗಳನ್ನು ಇದರ ಮೂಲಕ ಅಟೆಂಡ್ ಮಾಡಿದರೆ ಏಕಾಗ್ರತೆಗೆ ಯಾವುದೇ ಭಂಗ ಇರೋದಿಲ್ಲ.