ರಿಲಯನ್ಸ್ ಜಿಯೋ ಕಂಪನಿ ಏಪ್ರಿಲ್ ತಿಂಗಳೊಂದರಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.68 ಲಕ್ಷಕ್ಕೂ ಅಧಿಕ ಹೊಸ ಚಂದಾದಾರರನ್ನ ಗಳಿಸಿದೆ. ಈ ಮೂಲಕ ಒಟ್ಟು 1.99 ಕೋಟಿ ಗ್ರಾಹಕರನ್ನ ರಿಲಯನ್ಸ್ ಜಿಯೋ ಸಂಪಾದಿಸಿದೆ.
ಇನ್ನೊಂದೆಡೆ ಏರ್ಟೆಲ್ ಹಾಗೂ ವೋಡಾಫೋನ್ ಕಂಪನಿಗಳು ಏಪ್ರಿಲ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಗ್ರಾಹಕರನ್ನ ಕಳೆದುಕೊಂಡಿವೆ. ದೆಹಲಿಯಲ್ಲಿ 88,234 ಗ್ರಾಹಕರನ್ನ ಕಳೆದುಕೊಂಡ ಏರ್ಟೆಲ್ ಚಂದಾದಾರರ ಸಂಖ್ಯೆ 1.63 ಕೋಟಿ ಆಗಿದೆ. ಅದೇ ರೀತಿ 86,331 ಗ್ರಾಹಕರನ್ನ ಕಳೆದುಕೊಂಡ ವೋಡಾಫೋನ್ ರಾಷ್ಟ್ರ ರಾಜಧಾನಿಯಲ್ಲಿ 1.61 ಕೋಟಿ ಗ್ರಾಹಕರನ್ನ ಉಳಿಸಿಕೊಂಡಿದೆ.
ಕೇವಲ ದೆಹಲಿ ಮಾತ್ರವಲ್ಲದೇ ದೇಶಾದ್ಯಂತ ಏಪ್ರಿಲ್ ತಿಂಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಸಂಪಾದಿಸಿದ ಟೆಲಿಕಾಂ ಸಂಸ್ಥೆ ಎಂಬ ಖ್ಯಾತಿ ಕೂಡ ಜಿಯೋಗೆ ದೊರಕಿದೆ. ಏಪ್ರಿಲ್ ತಿಂಗಳೊಂದರಲ್ಲೇ 47.56 ಲಕ್ಷ ಮಂದಿ ಜಿಯೋ ಸಿಮ್ ಖರೀದಿ ಮಾಡಿದ್ದಾರೆ.
ಭಾರತಿ ಏರ್ಟೆಲ್ ಕಳೆದೊಂದು ತಿಂಗಳಲ್ಲಿ ದೇಶಾದ್ಯಂತ 5.17 ಕೋಟಿ ಗ್ರಾಹಕರನ್ನ ಸಂಪಾದಿಸುವ ಮೂಲಕ ಒಟ್ಟು ಚಂದಾದಾರರ ಸಂಖ್ಯೆ 35.29 ಕೋಟಿ ಆಗಿದೆ. ಅದೇ ರೀತಿ ವೋಡಾಫೋನ್ ಐಡಿಯಾ ಕೂಡ 18.10 ಕೋಟಿ ಇದ್ದ ಚಂದಾದಾರರ ಸಂಖ್ಯೆಯನ್ನ 28.19 ಕೋಟಿಗೆ ಏರಿಕೆ ಮಾಡಿಕೊಂಡಿದೆ.
ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಕೂಡ 13.05 ಲಕ್ಷ ಗ್ರಾಹಕರನ್ನ ಕಳೆದುಕೊಳ್ಳುವ ಮೂಲಕ 11.72 ಕೋಟಿ ಚಂದಾದಾರನ್ನ ಹೊಂದಿದೆ.
ಮಾರ್ಚ್ ತಿಂಗಳಲ್ಲಿ 1180.96 ಮಿಲಿಯನ್ ಇದ್ದ ಒಟ್ಟು ವೈರ್ಲೆಸ್ ಚಂದಾದಾರರ ಸಂಖ್ಯೆ ಏಪ್ರಿಲ್ ಅಂತ್ಯದ ವೇಳೆಗೆ 1183.11 ಮಿಲಿಯನ್ರಷ್ಟಾಗಿದೆ.