alex Certify ರಿಲಾಯನ್ಸ್ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ, ಪಡೆಯಿರಿ ಉಚಿತ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಾಯನ್ಸ್ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ, ಪಡೆಯಿರಿ ಉಚಿತ ಡೇಟಾ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಖುಷಿಯ ಸುದ್ದಿಯೊಂದಿದೆ. ಗ್ರಾಹಕರಿಗೆ ಉಚಿತ ಡೇಟಾ ಗೆಲ್ಲುವ ಅವಕಾಶ ಸಿಗ್ತಿದೆ. ಜಿಯೋ ಗ್ರಾಹಕರಿಗಾಗಿ Jio Desserts Corner Picture Quiz ಏರ್ಪಡಿಸ್ತಿದೆ. ಇಂದಿನಿಂದ ಈ ರಸಪ್ರಶ್ನೆ ಕಾರ್ಯಕ್ರಮ ಶುರುವಾಗಿದೆ. ಇದ್ರಲ್ಲಿ ಸರಿಯಾದ ಉತ್ತರ ನೀಡಿದ ಗ್ರಾಹಕರಿಗೆ ಉಚಿತ ಡೇಟಾ ಸಿಗಲಿದೆ.

ಜಿಯೋ ಇದಕ್ಕಾಗಿ ಓರಿಯೋ, ಟ್ಯಾಂಗ್ ಮತ್ತು ಕ್ಯಾಡ್ಬರಿ ಡೈರಿ ಮಿಲ್ಕ್ ಸಹಯೋಗದೊಂದಿಗೆ ಇದನ್ನು ಆಯೋಜಿಸುತ್ತಿದೆ. ಉಚಿತ ಡೇಟಾ ಜೊತೆ ಕೆಲವು ಉಡುಗೊರೆ ಕೂಡ ಗ್ರಾಹಕರಿಗೆ ಸಿಗಲಿದೆ.

ಈ ಎಲ್ಲಾ ಸ್ಪರ್ಧೆಗಳನ್ನು ಜಿಯೋ ಎಂಗೇಜ್ ವಿಭಾಗದ ಅಡಿಯಲ್ಲಿ ಆಯೋಜಿಸುತ್ತಿದೆ. ಜಿಯೋ ಡೆಸರ್ಟ್ ಕಾರ್ನರ್ ಪಿಕ್ಚರ್ ಕ್ವಿಜ್ ವಿಷಯವನ್ನು ದೀಪಾವಳಿಗೆ ಮುನ್ನ ನಡೆಸಲಾಗುತ್ತಿದೆ. ಜಿಯೋ ಡೆಸರ್ಟ್ ಕಾರ್ನರ್ ಪಿಕ್ಚರ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಜಿಯೋ ಎಂಗೇಜ್ ವಿಭಾಗದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ತೋರಿಸಿರುವ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಪ್ರತಿ ದಿನ ಹೊಸ ಪ್ರಶ್ನೆಗಳನ್ನು ಕೇಳಲಾಗುತ್ತಾ ಅಥವಾ ಇದೇ ಪ್ರಶ್ನೆ ಇರುತ್ತಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಂದು ಗ್ರಾಹಕರಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದೆ.

ಜಿಯೋ ಡೆಸರ್ಟ್ ಕಾರ್ನರ್ ಪಿಕ್ಚರ್ ಕ್ವಿಜ್‌ನಲ್ಲಿ ಭಾಗವಹಿಸಿ, ಗೆದ್ದವರಿಗೆ ಜಿಯೋ 100ಎಂಬಿ ಡೇಟಾ ನೀಡುತ್ತದೆ. 20 ಅದೃಷ್ಟ ವಿಜೇತರಿಗೆ 5,000 ಮೌಲ್ಯದ ರಿಲಯನ್ಸ್ ರಿಟೇಲ್ ವೋಚರ್ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...