ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಕಂಪನಿಯು ವೊಡಾಫೋನ್ - ಐಡಿಯಾ ಕಂಪನಿಗಳ ಹೊಸ ಪ್ರಿಪೇಯ್ಡ್ ಪ್ಲಾನ್ಗಳ ವಿರುದ್ಧ ಟೆಲಿಕಾಂ ರೆಗ್ಯುಲೆಟರಿಗೆ ದೂರು ನೀಡಿದೆ.
ಈ ಹೊಸ ಪ್ರಿಪೇಯ್ಡ್ ಪ್ಲಾನ್ನ್ನು ಹೊಂದಿದ ಗ್ರಾಹಕರಿಗೆ ಬೇರೆ ಸೇವೆಗಳಿಗೆ ಪೋರ್ಟ್ ಆಗಲು ಅನೇಕ ಕಡಿವಾಣಗಳನ್ನು ಹಾಕಲಾಗುತ್ತಿದೆ. ಈ ಸಂಬಂಧ ವಿಚಾರಣೆ ನಡೆಸುವಂತೆ ರಿಲಯನ್ಸ್ ಜಿಯೋ ಕೋರಿದೆ.
ಕಳೆದ ವಾರ ಟೆಲಿಕಾಂ ರೆಗ್ಯೂಲೆಟರಿ ಆಫ್ ಇಂಡಿಯಾಗೆ ಬರೆದ ಪತ್ರದಲ್ಲಿ ಜಿಯೋ ಕಂಪನಿಯು, ವೊಡಾಫೋನ್ - ಐಡಿಯಾ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ತನ್ನ ಎಸ್ಎಂಎಸ್ ಸೇವೆಯನ್ನು ಪ್ರಸ್ತುತ 149 ರೂಪಾಯಿ ದರದಿಂದ 179 ರೂಪಾಯಿ ಹೆಚ್ಚಿನ ಸುಂಕದ ಯೋಜನೆಗೆ ವರ್ಗಾವಣೆ ಮಾಡಿದೆ.
ಅಂದರೆ ಕಡಿಮೆ ಮೊತ್ತದ ಪ್ರಿಪೇಯ್ಡ್ ಪ್ಲಾನ್ ಹೊಂದಿರುವ ವೊಡಾಫೋನ್ - ಇಂಡಿಯಾ ಗ್ರಾಹಕರಿಗೆ ಎಸ್ಎಂಎಸ್ ಸೇವೆಯೇ ಇರುವುದಿಲ್ಲ. ಹೀಗಾಗಿ ಅವರು ಬೇರೆ ಸೇವೆಗಳಿಗೆ ಹೋಗಲು ಪೋರ್ಟ್ ಎಸ್ಎಂಎಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ರಿಲಯನ್ಸ್ ಜಿಯೋ ದೂರಿದೆ.
ಕಡಿಮೆ ಮೊತ್ತದ ರಿಚಾರ್ಜ್ ಹೊಂದಿರುವ ಗ್ರಾಹಕ ಬೇರೊಂದು ನೆಟ್ವರ್ಕ್ ಸೇವೆಗೆ ಪೋರ್ಟ್ ಆಗಬೇಕು ಅಂದಲ್ಲಿ ಆತ 179 ರೂಪಾಯಿ ರಿಚಾರ್ಜ್ ಮಾಡಿಸಿ ಬಳಿಕ ಪೋರ್ಟ್ ಆಗಬೇಕು. ಇದು ಗ್ರಾಹಕರನ್ನು ಬೇರೆ ಸೇವೆಗಳಿಗೆ ಪೋರ್ಟ್ ಆಗಲು ನಿರುತ್ಸಾಹಗೊಳಿಸುತ್ತದೆ ಎಂದು ರಿಲಯನ್ಸ್ ಜಿಯೋ ತನ್ನ ದೂರಿನಲ್ಲಿ ತಿಳಿಸಿದೆ.
ಈ ಸಮಸ್ಯೆಯನ್ನು ನಿವಾರಿಸಲು ವೊಡಾಫೋನ್ - ಐಡಿಯಾ ಎಸ್ಎಂಎಸ್ ಸೇವೆಯಲ್ಲಿ ಎಲ್ಲಾ ರಿಚಾರ್ಜ್ ಪ್ಲಾನ್ಗಳಿಗೆ ಮುಕ್ತಗೊಳಿಸಬೇಕು. ಅಥವಾ ಗ್ರಾಹಕರಿಗೆ ಪೋರ್ಟ್ ಎಸ್ಎಂಎಸ್ ಮಾಡಲು ಇರುವ ನಿಬಂಧನೆಯನ್ನು ತೆಗೆದುಹಾಕಬೆಂದು ಜಿಯೋ ಸಲಹೆ ನೀಡಿದೆ.