alex Certify 8 ಮೆಟ್ರೋಗಳಲ್ಲಿ ಜಿಯೋ ಏರ್ ಫೈಬರ್ ಗೆ ಚಾಲನೆ; ಕೇಬಲ್‌ ಇಲ್ಲದೆ ಅಲ್ಟ್ರಾಹೈ ಸ್ಪ್ರೀಡ್‌ ಇಂಟರ್ನೆಟ್‌ ಸಿಗುವ ಸೌಲಭ್ಯ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ಮೆಟ್ರೋಗಳಲ್ಲಿ ಜಿಯೋ ಏರ್ ಫೈಬರ್ ಗೆ ಚಾಲನೆ; ಕೇಬಲ್‌ ಇಲ್ಲದೆ ಅಲ್ಟ್ರಾಹೈ ಸ್ಪ್ರೀಡ್‌ ಇಂಟರ್ನೆಟ್‌ ಸಿಗುವ ಸೌಲಭ್ಯ ಕುರಿತು ಇಲ್ಲಿದೆ ಮಾಹಿತಿ

ಗಣೇಶ ಚತುರ್ಥಿಯ ವಿಶೇಷ ಸಂದರ್ಭದಲ್ಲಿ ಮುಕೇಶ್‌ ಅಂಬಾನಿ ಅವರ ಒಡೆತನದ ರಿಲಯನ್ಸ್ ಜಿಯೋ, ದೇಶದ 8 ಮೆಟ್ರೋ ನಗರಗಳಲ್ಲಿ ಜಿಯೋ ಏರ್‌ ಫೈಬರ್ ‌ಗೆ ಚಾಲನೆ ನೀಡಿದೆ.

ಜಿಯೋ ಏರ್ ಫೈಬರ್ ಒಂದು ಇಂಟಿಗ್ರೇಟೆಡ್‌ ನೇರ ಪರಿಹಾರವಾಗಿದ್ದು, ಹೋಮ್‌ ಎಂಟರ್ ‌ಟೈನ್‌ಮೆಂಟ್‌, ಸ್ಮಾರ್ಟ್‌ ಹೋಮ್‌ ಮತ್ತು ಅತಿ ವೇಗದ ಬ್ರಾಡ್‌ಬ್ಯ್ರಾಂಡ್‌ ಸೇವೆಯನ್ನು ಪೂರೈಸಲಿದೆ.

ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತಾ, ಅಹಮದಾಬಾದ್, ಬೆಂಗಳೂರು, ಚೆನ್ನೈ ಮತ್ತು ಪುಣೆ ಮೆಟ್ರೋ ನಗರಗಳಲ್ಲಿ ಜಿಯೋ ಏರ್‌ ಫೈಬರ್‌ ಸೇವೆಗೆ ಚಾಲನೆ ನೀಡಲಾಗಿದೆ.

ಏರ್ ಫೈಬರ್ ಮತ್ತು ಏರ್ ಫೈಬರ್ ಮ್ಯಾಕ್ಸ್ ಹೆಸರುಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗ್ರಾಹಕರಿಗೆ ಏರ್‌ ಫೈಬರ್‌ ಎರಡು ವೇಗದ ಸೇವೆಯನ್ನು ಒದಗಿಸಲಿದೆ, 30 ಎಂಬಿಪಿಎಸ್‌ ಮತ್ತು 100 ಎಂಬಿಪಿಎಸ್‌ ವೇಗದಲ್ಲಿ ಇಂಟರ್ನೆಟ್‌ ಲಭ್ಯವಾಗಲಿದೆ.

ಕಂಪನಿಯು 30 ಎಂಬಿಪಿಎಸ್‌ ವೇಗದ ಇಂಟರ್ನೆಟ್ ‌ಅನ್ನು 599 ರೂ.ಗಳಿಗೆ. 100 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಅನ್ನು 899 ರೂ.ಗಳಿಗೆ ನೀಡುತ್ತಿದೆ. ಈ ಎರಡೂ ಪ್ಲಾನ್‌ಗಳಿಂದ ಗ್ರಾಹಕರಿಗೆ 550ಗೂ ಹೆಚ್ಚು ಡಿಜಿಟಲ್‌ ಚಾನೆಲ್‌ಗಳು ಮತ್ತು 14 ಮನರಂಜನಾ ಆಪ್‌ಗಳು ದೊರೆಯಲಿವೆ.

ಏರ್ ಫೈಬರ್ ಯೋಜನೆಯಡಿಯಲ್ಲಿ, ಕಂಪನಿಯು 100 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಸೇವೆಯನ್ನು 1199 ರೂ.ಗಳಿಗೆ ಪರಿಚಯಿಸಿದೆ. ಇದರಲ್ಲಿ ಮೇಲೆ ಹೇಳಿದ ಚಾನಲ್‌ಗಳು ಮತ್ತು ಅಪ್ಲಿಕೇಶನ್‌ಗಳ ಜೊತೆಗೆ, ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಸಹ ಲಭ್ಯವಿರುತ್ತವೆ.

ಹೆಚ್ಚಿನ ಇಂಟರ್ನೆಟ್ ವೇಗವನ್ನು ಬಯಸುವ ಗ್ರಾಹಕರು ‘ಏರ್ ಫೈಬರ್ ಮ್ಯಾಕ್ಸ್’ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಕಂಪನಿಯು ಮಾರುಕಟ್ಟೆಯಲ್ಲಿ 300 ಎಂಬಿಪಿಎಸ್‌ ನಿಂದ 1000 ಎಂಬಿಪಿಎಸ್‌ ವರೆಗೆ ಅಂದರೆ 1 ಜಿಬಿಪಿಎಸ್‌ ವರೆಗಿನ ಮೂರು ಯೋಜನೆಗಳನ್ನು ಪರಿಚಯಿಸಿದೆ. 300 ಎಂಬಿಪಿಎಸ್‌ ವೇಗದ ಇಂಟರ್ನೆಟ್‌, ರೂ 1499 ಕ್ಕೆ ಲಭ್ಯವಿರುತ್ತದೆ. ಗ್ರಾಹಕರು 2499 ರೂ.ಗೆ 500 ಎಂಬಿಪಿಎಸ್‌ ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದು. ಅಲ್ಲದೆ ಗ್ರಾಹಕರು 1 ಜಿಬಿಪಿಎಸ್‌ ವೇಗದ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕೆ 3999 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. 550 ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‌ಗಳು, 14 ಮನರಂಜನಾ ಅಪ್ಲಿಕೇಶನ್‌ಗಳು ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಈ ಪ್ಲಾನ್‌ನಲ್ಲಿ ದೊರೆಯುತ್ತವೆ.

ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು ಭಾರತದಾದ್ಯಂತ 15 ಲಕ್ಷ ಕಿ.ಮೀ.ಗಳಷ್ಟುವ್ಯಾಪಿಸಿದೆ. ಕಂಪನಿಯು ತನ್ನ ಜಿಯೋ ಫೈಬರ್ ಸೇವೆಯೊಂದಿಗೆ ಇದುವರೆಗೆ 1 ಕೋಟಿಗೂ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಿದೆ. ಆದರೆ ಇನ್ನೂ ಕೋಟಿಗಟ್ಟಲೆ ಮನೆಗಳನ್ನು ಬೆಸೆಯಬೇಕಿದ್ದು, ಅಲ್ಲಿ ಕೇಬಲ್‌ ಅಥವಾ ಫೈಬರ್ ಸಂಪರ್ಕವನ್ನು ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಜಿಯೋ ಏರ್ ಫೈಬರ್ ಅಂತಹ ಕಟ್ಟಡ ಕಡೆಯ ಬಿಂದುವನ್ನು ಬೆಸೆಯುವ ಕಷ್ಟವನ್ನು ಕಡಿಮೆ ಮಾಡುತ್ತದೆ. ಜಿಯೋ ಏರ್ ಫೈಬರ್ ಮೂಲಕ 20 ಕೋಟಿ ಮನೆಗಳು ಮತ್ತು ಪರಿಸರಗಳನ್ನು ತಲುಪಲು ಕಂಪನಿಯು ಆಶಿಸುತ್ತಿದೆ.

ಜಿಯೋ ಏರ್ ಫೈಬರ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಬುಕ್ ಮಾಡಬಹುದು. 60008-60008 ಗೆ ಮಿಸ್‌ ಕಾಲ್ ನೀಡುವ ಮೂಲಕ ಅಥವಾ www.jio.com ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು. ಜಿಯೋ ಏರ್ ಫೈಬರ್ ಅನ್ನು ಜಿಯೋ ಸ್ಟೋರ್‌ಗಳಿಂದಲೂ ಖರೀದಿಸಬಹುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...