alex Certify ʼಕಾಲಾ ಚಶ್ಮಾʼಗೆ ಹೆಜ್ಜೆ ಹಾಕಿದ ಜಿಮ್ಮಿ ಫಾಲನ್- ಡೆಮಿ ಲೊವಾಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಲಾ ಚಶ್ಮಾʼಗೆ ಹೆಜ್ಜೆ ಹಾಕಿದ ಜಿಮ್ಮಿ ಫಾಲನ್- ಡೆಮಿ ಲೊವಾಟೋ

ಜಿಮ್ಮಿ ಫಾಲನ್​ ಮತ್ತು ಡೆಮಿ ಲೊವಾಟೊ ಅವರ ಡ್ಯಾನ್ಸ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅವರಿಬ್ಬರೂ ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅವರ ಬಾರ್​ ಬಾರ್​ ದೇಖೋ ಚಿತ್ರದ ಕಾಲಾ ಚಶ್ಮಾ ಎಂಬ ಪಂಜಾಬಿ ಹಾಡಿಗೆ ನೃತ್ಯ ಮಾಡಿದ್ದಾರೆ,

ವಿಡಿಯೊವನ್ನು ಜಿಮ್ಮಿ ಫಾಲೋನ್​ ಅವರ ಶೋ ಮತ್ತು ಡೆಮಿ ಲೊವಾಟೋ ಅವರ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ಟುನೈಟ್​ ಶೋ ಹೋಸ್ಟ್​ ನಡೆವಾಗ ಎಡವಿ ಬೀಳುತ್ತಾನೆ. ಡೆಮಿ ಮತ್ತು ಇತರರು ಅವನನ್ನು ಸಾಕಷ್ಟು ಕಾಳಜಿಯಿಂದ ನೋಡುತ್ತಾರೆ ಮತ್ತು ನಂತರ ಇದ್ದಕ್ಕಿದ್ದಂತೆ ಅವರು ಕಾಲಾ ಚಶ್ಮಾಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ.

ಜಿಮ್ಮಿ ಅದ್ಭುತವಾಗಿ ಸ್ಟೆಪ್​ ತೋರಿಸುತ್ತಿದ್ದಂತೆ ಅವನ ಸುತ್ತಲಿನ ಮಹಿಳಾ ಸಂಗೀತಗಾರರು ಗಿಟಾರ್​ ಅನ್ನು ಸ್ಟ್ರೆಮ್​ ಮಾಡಲು ಪ್ರಾರಂಭಿಸುತ್ತಾರೆ. ನೆಟ್ಟಿಗರು ಈ ಡ್ಯಾನ್ಸನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ಹಾರ್ಟ್​ ಮತ್ತು ಲವ್​ ಸಿಂಬಲ್​ ಎಮೋಜಿಗಳಿಂದ ತುಂಬಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...