ಪ್ರೀತಿ ಅನ್ನೋದು ಎರಡು ಹೃದಯಗಳ ಸಂಗಮ. ಆದರೆ ಇತ್ತೀಚಿನ ಯುವಜನರ ಪಾಲಿಗೆ ಪ್ರೀತಿಯ ಚಿತ್ರಣವೇ ಬದಲಾಗಿದೆ. ಪ್ರೀತಿ ಅನ್ನೊದು ಹುಚ್ಚಾಟದ ಪರಮಾವಧಿ ತಲುಪಿ ಬಿಟ್ಟಿದೆ. ಅಂತಹದ್ದೊಂದು ಘಟನೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಕಂಡು ಬಂದಿದೆ. ತಾನು ಪ್ರೀತಿಸಿದಾಕೆ ತನ್ನ ಪ್ರೀತಿ ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ವಿದ್ಯಾರ್ಥಿ, ವಿದ್ಯಾರ್ಥಿನಿಯನ್ನೇ ನಿರ್ದಯವಾಗಿ ಹಾಡಹಗಲೇ ಕೊಲೆ ಮಾಡಿದ್ದಾನೆ.
ಅದು ಔರಂಗಾಬಾದ್ನ ಪ್ರತಿಷ್ಟಿತ ದೇವಗಿರಿ ಕಾಲೇಜ್. ಅದೇ ಕಾಲೇಜ್ನ ಬ್ಯಾಚುಲರ್ಸ್ ಆಫ್ ಆ್ಯಡ್ಮಿನಿಸ್ಟ್ರೇಷನ್ನ ಫಸ್ಟ್ ಬ್ಯಾಚ್ನಲ್ಲಿ ಸುಖಪ್ರೀತ್ ಕೌರ್ ಓದುತ್ತಿದ್ದಳು. ಎಂದಿನಂತೆ ಆ ದಿನವೂ ಆಕೆ ಕ್ಲಾಸ್ ಮುಗಿಸಿಕೊಂಡು ಮನೆಗೆ ತೆರಳೋ ಸಮಯ. ಅದೇ ಸಮಯದಲ್ಲಿ ಶರಣ್ಸಿಂಹ್ ಸೇಥಿ ಅನ್ನೋ ವಿದ್ಯಾರ್ಥಿ ಹಿಂದಿನಿಂದ ಬಂದು ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಹಾಡಹಗಲೇ ಕಾಲೇಜ್ ಆವರಣದಲ್ಲಿ ನಡೆದಿರೋ ಈ ಘಟನೆಯಿಂದಾಗಿ ಕಾಲೇಜ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ.
BIG NEWS: ಸಿಲಿಕಾನ್ ಸಿಟಿಯನ್ನು ಸ್ವಿಮ್ಮಿಂಗ್ ಪೂಲ್ ಮಾಡಿದ BJP ಸರ್ಕಾರ; ಅಭಿವೃದ್ಧಿ ವಿಚಾರದಲ್ಲೂ ಕ್ಷೇತ್ರವಾರು ತಾರತಮ್ಯ ನೀತಿ; ಮತ್ತೆ ಕಿಡಿಕಾರಿದ ಕುಮಾರಸ್ವಾಮಿ
ಈ ಕೊಲೆ ಹಿಂದಿರೋ ಅಸಲಿ ಕಾರಣ ಪ್ರೀತಿ, ಪ್ರೇಮ. ಆರೋಪಿ ಶರಣ್ಸಿಂಹ್ ಸೇಥಿ, ಈತ ಇದೇ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಸುಖಪ್ರೀತ್ ಕೌರ್ ಅಲಿಯಾಸ್ ಕಾಶಿಕ್ ಈಕೆಯನ್ನ ಪ್ರೀತಿಸುತ್ತಿದ್ದ. ಪ್ರತಿಬಾರಿ ಆಕೆ ಸಿಕ್ಕಾಗೆಲ್ಲ ‘ನನ್ನನ್ನ ಪ್ರೀತಿಸು ’ ಅಂತ ಆಕೆಗೆ ಕಾಟ ಕೊಡುತ್ತಿದ್ದ. ಆಕೆ ಆತನ ಪ್ರೀತಿಯನ್ನ ನಿರಾಕರಿಸಿದ್ದಳು. ಆದರೂ ಕೂಡ ಈತ ಆಕೆಯ ಬೆನ್ನು ಬಿಟ್ಟಿರಲಿಲ್ಲ. ಕೊನೆಗೆ ಆಕೆ ಒಬ್ಬಂಟಿಯಾಗಿ ಸಿಕ್ಕಿದ್ದೇ ತಡ ಹಾಡ ಹಗಲೇ ಹಿಂದಿನಿಂದ ಹೋಗಿ ಬೆನ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ವಿದ್ಯಾರ್ಥಿನಿ ಪ್ರೀತಿ ನಿರಾಕರಿಸಿದ ಪರಿಣಾಮ ಶರಣ್ಸಿಂಹ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ತಕ್ಷಣವೇ ಅಲ್ಲಿದ್ದ ಉಳಿದ ವಿದ್ಯಾರ್ಥಿಗಳು ಪೊಲೀಸರಿಗೆ ಕರೆ ಮಾಡಿ ಘಟನೆ ಕುರಿತಿ ಮಾಹಿತಿ ನೀಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿನಿಯನ್ನ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.