alex Certify ‘ಪುಷ್ಪ’ ಶೈಲಿಯಲ್ಲಿ ಕೋರ್ಟ್ ನಿಂದ ಹೊರಬಂದ ಶಾಸಕ ಜಿಗ್ನೇಶ್ ಮೇವಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪ’ ಶೈಲಿಯಲ್ಲಿ ಕೋರ್ಟ್ ನಿಂದ ಹೊರಬಂದ ಶಾಸಕ ಜಿಗ್ನೇಶ್ ಮೇವಾನಿ

ಕೊಕ್ರಜಾರ್: ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಕೊಕ್ರಜಾರ್ ನ ಸ್ಥಳೀಯ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಗೋಡ್ಸೆ ಕುರಿತಾಗಿ ಪೋಸ್ಟ್‌ ಮಾಡಿದ್ದರು ಎಂಬ ಕಾರಣಕ್ಕೆ ಗುಜರಾತ್‌ನಿಂದ ಅಸ್ಸಾಂ ಪೊಲೀಸರು ಬಂಧಿಸಿದ್ದರು

ಮೇವಾನಿ ಅವರ ಮೂರು ದಿನಗಳ ಪೊಲೀಸ್ ಕಸ್ಟಡಿ ಭಾನುವಾರ ಕೊನೆಗೊಂಡಿತು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೇವಾನಿ ಅವರ ನಡೆ ‘ಪುಷ್ಪಾ’ ಸಿನಿಮಾದ ಶೈಲಿಯಲ್ಲಿ ಕೋರ್ಟ್‌ನಿಂದ ಹೊರಹೋಗುತ್ತಿರುವುದು ಕಂಡುಬಂದಿತು, ಅವರು ಎಂದಿಗೂ ತಲೆಬಾಗುವುದಿಲ್ಲ ಅಥವಾ ಕುಗ್ಗುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ.

ದೋಸೆ ಮಾರಾಟಗಾರನ ಅಸಾಧಾರಣ ಕೌಶಲ್ಯಕ್ಕೆ ಪ್ರಭಾವಿತರಾದ ಉದ್ಯಮಿ ಹರ್ಷ್ ಗೋಯೆಂಕಾ; ಅಷ್ಟಕ್ಕೂ ಅಂಥದ್ದೇನಿದೆ ಗೊತ್ತಾ..?

ಬೆಳಗ್ಗೆ 11 ಗಂಟೆ ಸುಮಾರಿಗೆ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಇಳಿದ ಮೇವಾನಿ ಅವರನ್ನು ರಸ್ತೆಯ ಮೂಲಕ ಸುಮಾರು 220 ಕಿಮೀ ದೂರದಲ್ಲಿರುವ ಕೊಕ್ರಜಾರ್ ಗೆ ಕರೆದೊಯ್ಯಲಾಯಿತು. ಕೊಕ್ರಜಾರ್‌ನಲ್ಲಿ ಪ್ರಕರಣ ದಾಖಲಿಸಿದ ನಂತರ ಪ್ರಮುಖ ದಲಿತ ನಾಯಕನನ್ನು ಗುಜರಾತ್‌ನ ಪಾಲಂಪುರ್ ಪಟ್ಟಣದಿಂದ ಬಂಧಿಸಲಾಗಿದೆ ಎಂದು ಆತನ ಸಹಾಯಕ ಸುರೇಶ್ ಜಾಟ್ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಇದು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧಗಳಿಗೆ ಸಂಬಂಧಿಸಿದೆ. ಅಸ್ಸಾಂ ಪೊಲೀಸ್ ಅಧಿಕಾರಿಗಳು ಹಂಚಿಕೊಂಡ ದಾಖಲೆಯ ಪ್ರಕಾರ, ಕೆಲವು ದಿನಗಳ ಹಿಂದೆ ಮೇವಾನಿ ಮಾಡಿದ ಟ್ವೀಟ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಟ್ವೀಟ್ ಅನ್ನು ಟ್ವಿಟರ್ ತಡೆಹಿಡಿದಿದೆ.

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ನಿಂದ ಸ್ವತಂತ್ರ ಶಾಸಕರಾಗಿರುವ ಮೇವಾನಿ ಅವರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಅವರ ಬಂಧನ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...