alex Certify ಮತ್ತೊಂದು ಪೈಶಾಚಿಕ ಕೃತ್ಯ: ಗಂಡನ ಜೊತೆಗಿದ್ದ ಮಹಿಳೆ ಮೇಲೆ 17 ಜನರಿಂದ ಗ್ಯಾಂಗ್ ರೇಪ್ –ಜಾರ್ಖಂಡ್ ನಲ್ಲಿ ಕಾಮುಕರ ಅಟ್ಟಹಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಪೈಶಾಚಿಕ ಕೃತ್ಯ: ಗಂಡನ ಜೊತೆಗಿದ್ದ ಮಹಿಳೆ ಮೇಲೆ 17 ಜನರಿಂದ ಗ್ಯಾಂಗ್ ರೇಪ್ –ಜಾರ್ಖಂಡ್ ನಲ್ಲಿ ಕಾಮುಕರ ಅಟ್ಟಹಾಸ

 ರಾಂಚಿ: ಜಾರ್ಖಂಡ್ ಡುಮ್ಕಾ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯದ ಮತ್ತೊಂದು ಪ್ರಕರಣ ನಡೆದಿದೆ.. 35 ವರ್ಷದ ಮಹಿಳೆ ಮೇಲೆ 17 ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ನೀಡಿದ ದೂರು ಆಧರಿಸಿ ಶಂಕಿತರಲ್ಲಿ ಒಬ್ಬನನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ.

ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಘಟನೆ ನಡೆದಿದೆ. ಐವರು ಮಕ್ಕಳ ತಾಯಿಯಾಗಿರುವ ಮಹಿಳೆ ಗಂಡನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ಮಂಗಳವಾರ ತಡರಾತ್ರಿ ಮಾರುಕಟ್ಟೆಯಿಂದ ಮನೆಗೆ ಹೋಗುತ್ತಿದ್ದ ದಂಪತಿಯನ್ನು ತಡೆದ ದುಷ್ಕರ್ಮಿಗಳು, ಗಂಡನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ದೂರುದಾರ ಮಹಿಳೆಯ ಹೇಳಿಕೆಗಳು ಸ್ಥಿರವಾಗಿಲ್ಲ, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...