alex Certify BREAKING: ರೈಲ್ವೆ ಹಳಿಯ ಮೇಲೆ ನಕ್ಸಲರಿಂದ ಬಾಂಬ್​ ಸ್ಪೋಟ….! ಮುಂದುವರಿದ ಕಾರ್ಯಾಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರೈಲ್ವೆ ಹಳಿಯ ಮೇಲೆ ನಕ್ಸಲರಿಂದ ಬಾಂಬ್​ ಸ್ಪೋಟ….! ಮುಂದುವರಿದ ಕಾರ್ಯಾಚರಣೆ

ಬೆಳ್ಳಂ ಬೆಳಗ್ಗೆಯೇ ರೈಲ್ವೆ ಹಳಿಯೊಂದರಲ್ಲಿ ರಹಸ್ಯ ಸ್ಫೋಟವುಂಟಾದ ಘಟನೆಯೊಂದು ಜಾರ್ಖಂಡ್​ನ ಧನ್​ಬಾದ್​​ನಲ್ಲಿ ನಡೆದಿದೆ. ಸ್ಫೋಟದಿಂದ ರೈಲ್ವೆ ಹಳಿ ಒಂದು ಭಾಗ ಹಾನಿಯಾಗಿದೆ ಹಾಗೂ ಡೀಸೆಲ್​ ಇಂಜಿನ್​ ಹಳಿ ತಪ್ಪಿದೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆ, ಧನ್​ಬಾದ್​ ವಿಭಾಗದ ಗರ್ವಾ ರಸ್ತೆ ಹಾಗೂ ಬರ್ಕಾನಾ ವಿಭಾಗದ ನಡುವೆ ಸಂಭವಿಸಿದ ಘಟನೆಯು ಬಾಂಬ್​ ಸ್ಪೋಟದಿಂದ ಉಂಟಾಗಿದೆ ಎಂದು ಹೇಳಿದೆ.

ರೈಲ್ವೆ ಹಳಿಯಲ್ಲಿ ದುಷ್ಕರ್ಮಿಯು ಬಾಂಬ್​ ಸ್ಫೋಟಿಸಿದ್ದು ಇದರಿಂದಾಗಿ ಡಿಸೇಲ್​ ಲೋಕೋ ಹಳಿ ತಪ್ಪಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಈ ಬಾಂಬ್​ ಸ್ಪೋಟದ ಹಿಂದೆ ನಕ್ಸಲ್​ ಕೈವಾಡ ಇದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸ್​ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...