alex Certify ಶಿವಾಜಿ ಜಯಂತಿ ಪ್ರಯುಕ್ತ ವಿಶೇಷ ಪೋಸ್ಟ್​ ಕಾರ್ಡ್​ಗಳ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಾಜಿ ಜಯಂತಿ ಪ್ರಯುಕ್ತ ವಿಶೇಷ ಪೋಸ್ಟ್​ ಕಾರ್ಡ್​ಗಳ ಬಿಡುಗಡೆ

ಭಾರತೀಯ ಅಂಚೆ ಇಲಾಖೆಯ ಪುಣೆ ಕಚೇರಿಯು ಶಿವಾಜಿ ಜಯಂತಿ ಪ್ರಯುಕ್ತ ಶಿವನೇರಿ ಕೋಟೆಯಲ್ಲಿ ಜ್ಯುವೆಲ್ಸ್​ ಆಫ್​ ಜುನ್ನಾರ್​ ಎಂಬ ವಿಷಯವನ್ನಾಧರಿಸಿ 15 ಪೋಸ್ಟ್​ ಕಾರ್ಡ್​ಗಳನ್ನು ಬಿಡುಗಡೆ ಮಾಡಿದೆ.

ಈ ವಿಶೇಷ ಅಂಚೆ ಕಾರ್ಡ್​ಗಳ ಮೊದಲ ಸೆಟ್​ನ್ನು ಪುಣೆಯ ಪೋಸ್ಟ್​​ಮಾಸ್ಟರ್​ ಜನರಲ್​​ ಜಿ. ಮಧುಮಿತಾ ಮಹಾರಾಷ್ಟ್ರ ಡಿಸಿಎ ಅಜಿತ್​ ಪವಾರ್​ರಿಗೆ ನೀಡಿದರು.

ಪರಿಸರವಾದಿ ಸಚಿನ್ ಪುಣೇಕರ್ ವಿನ್ಯಾಸಗೊಳಿಸಿದ ಎಲ್ಲಾ ಪೋಸ್ಟ್‌ಕಾರ್ಡ್‌ಗಳು ಜುನ್ನಾರ್ ತಹಸಿಲ್‌ನ ಆಯ್ದ ಐತಿಹಾಸಿಕ, ಪುರಾತತ್ವ ಮತ್ತು ಪ್ರವಾಸಿ ತಾಣಗಳನ್ನು ಚಿತ್ರಿಸುತ್ತದೆ. ಶಿವನೇರಿ ಕೋಟೆ, ಜೈಂಟ್ ಮೆಟ್ರೆವೇವ್ ರೇಡಿಯೋ ಟೆಲಿಸ್ಕೋಪ್, ಲೆನ್ಯಾದ್ರಿ ಗುಹೆಗಳು ವಿಶೇಷ ಅಂಚೆ ಕಾರ್ಡ್‌ಗಳಲ್ಲಿ ಕಾಣಿಸಿಕೊಂಡಿವೆ.

ಇದರ ಜೊತೆಯಲ್ಲಿ, ಪೋಸ್ಟ್‌ಕಾರ್ಡ್‌ಗಳು ತಾಲೂಕಿನ ಶ್ರೀಮಂತ ಜೀವವೈವಿಧ್ಯದ ಜೊತೆಗೆ ವೈಶಿಷ್ಟ್ಯಗೊಳಿಸಿದ ಸ್ಥಳಗಳ ಬಗ್ಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿಯನ್ನು ಒದಗಿಸುತ್ತವೆ. ಈ ಪೋಸ್ಟ್‌ಕಾರ್ಡ್‌ಗಳನ್ನು ಅಂಚೆ ಇಲಾಖೆಯ ಪುಣೆಯ ಕೇಂದ್ರ ಕಚೇರಿಯಲ್ಲಿರುವ ಅಂಚೆಚೀಟಿಗಳ ಸಂಗ್ರಹಣೆ ಬ್ಯೂರೋದಿಂದ ಖರೀದಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...