ಭಾರತೀಯ ಅಂಚೆ ಇಲಾಖೆಯ ಪುಣೆ ಕಚೇರಿಯು ಶಿವಾಜಿ ಜಯಂತಿ ಪ್ರಯುಕ್ತ ಶಿವನೇರಿ ಕೋಟೆಯಲ್ಲಿ ಜ್ಯುವೆಲ್ಸ್ ಆಫ್ ಜುನ್ನಾರ್ ಎಂಬ ವಿಷಯವನ್ನಾಧರಿಸಿ 15 ಪೋಸ್ಟ್ ಕಾರ್ಡ್ಗಳನ್ನು ಬಿಡುಗಡೆ ಮಾಡಿದೆ.
ಈ ವಿಶೇಷ ಅಂಚೆ ಕಾರ್ಡ್ಗಳ ಮೊದಲ ಸೆಟ್ನ್ನು ಪುಣೆಯ ಪೋಸ್ಟ್ಮಾಸ್ಟರ್ ಜನರಲ್ ಜಿ. ಮಧುಮಿತಾ ಮಹಾರಾಷ್ಟ್ರ ಡಿಸಿಎ ಅಜಿತ್ ಪವಾರ್ರಿಗೆ ನೀಡಿದರು.
ಪರಿಸರವಾದಿ ಸಚಿನ್ ಪುಣೇಕರ್ ವಿನ್ಯಾಸಗೊಳಿಸಿದ ಎಲ್ಲಾ ಪೋಸ್ಟ್‌ಕಾರ್ಡ್‌ಗಳು ಜುನ್ನಾರ್ ತಹಸಿಲ್‌ನ ಆಯ್ದ ಐತಿಹಾಸಿಕ, ಪುರಾತತ್ವ ಮತ್ತು ಪ್ರವಾಸಿ ತಾಣಗಳನ್ನು ಚಿತ್ರಿಸುತ್ತದೆ. ಶಿವನೇರಿ ಕೋಟೆ, ಜೈಂಟ್ ಮೆಟ್ರೆವೇವ್ ರೇಡಿಯೋ ಟೆಲಿಸ್ಕೋಪ್, ಲೆನ್ಯಾದ್ರಿ ಗುಹೆಗಳು ವಿಶೇಷ ಅಂಚೆ ಕಾರ್ಡ್‌ಗಳಲ್ಲಿ ಕಾಣಿಸಿಕೊಂಡಿವೆ.
ಇದರ ಜೊತೆಯಲ್ಲಿ, ಪೋಸ್ಟ್‌ಕಾರ್ಡ್‌ಗಳು ತಾಲೂಕಿನ ಶ್ರೀಮಂತ ಜೀವವೈವಿಧ್ಯದ ಜೊತೆಗೆ ವೈಶಿಷ್ಟ್ಯಗೊಳಿಸಿದ ಸ್ಥಳಗಳ ಬಗ್ಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿಯನ್ನು ಒದಗಿಸುತ್ತವೆ. ಈ ಪೋಸ್ಟ್‌ಕಾರ್ಡ್‌ಗಳನ್ನು ಅಂಚೆ ಇಲಾಖೆಯ ಪುಣೆಯ ಕೇಂದ್ರ ಕಚೇರಿಯಲ್ಲಿರುವ ಅಂಚೆಚೀಟಿಗಳ ಸಂಗ್ರಹಣೆ ಬ್ಯೂರೋದಿಂದ ಖರೀದಿಸಬಹುದು.