ನವದೆಹಲಿ: ಮಾರ್ಚ್ 15 ರಿಂದ 18 ರವರೆಗೆ ನಡೆಯಬೇಕಿದ್ದ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಮಾ. 16 ರಿಂದ 18 ರವರೆಗೆ ನಡೆಯಲಿದೆ. ಈಗಾಗಲೇ ಜೆಇಇ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಮಾಹಿತಿಗಾಗಿ jeemain.nta.nic.in ಗಮನಿಸಬಹುದಾಗಿದೆ. ಈ ಮೊದಲು ನಾಲ್ಕು ದಿನಗಳ ಕಾಲ ನಡೆಯಬೇಕಿದ್ದ ಮುಖ್ಯಪರೀಕ್ಷೆಯ ಈಗ ಮೂರು ದಿನಗಳಲ್ಲಿ ನಡೆಯಲಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ದೇಶಾದ್ಯಂತ 331 ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ 2021 ರ ಮಾರ್ಚ್ 16 ರಿಂದ 18 ರವರೆಗೆ ಪರೀಕ್ಷೆ ನಡೆಸಲಿದೆ. ಈ ವರ್ಷ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.