alex Certify ಇಲ್ಲಿದೆ ಕೊರೊನಾ ಸೋಂಕು ಪತ್ತೆ ಮಾಡಬಲ್ಲ ಮಾಸ್ಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕೊರೊನಾ ಸೋಂಕು ಪತ್ತೆ ಮಾಡಬಲ್ಲ ಮಾಸ್ಕ್​

2019 ಡಿಸೆಂಬರ್​ನಿಂದ ಶುರುವಾದ ಕೊರೊನಾ ಮಾರಿ ನಾನಾ ರೂಪಗಳನ್ನು ತಾಳುತ್ತಿದೆಯೇ ಹೊರತು ಪ್ರಪಂಚವನ್ನು ಬಿಟ್ಟು ಹೋಗುವ ಹಾಗೆ ಕಾಣುತ್ತಿಲ್ಲ. ಕೋವಿಡ್​ ವಾಸಿ ಮಾಡಲು ವಿಜ್ಞಾನಿಗಳು ಕೊರೊನಾ ಲಸಿಕೆ, ಬೂಸ್ಟರ್​ ಶಾಟ್​ ಹೀಗೆ ನಾನಾ ಸಂಶೋಧನೆಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಜಪಾನ್​ನ ಸಂಶೋಧಕರು ಕೊರೊನಾ ಸೋಂಕನ್ನು ಕಂಡುಹಿಡಿಯಬಲ್ಲ ಮಾಸ್ಕ್​ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಪಶ್ಚಿಮ ಜಪಾನ್​ನ ಕ್ಯೋಟೋ ಪ್ರಿಫೆಕ್ಚುರಲ್​ ಯೂನಿವರ್ಸಿಟಿಯಲ್ಲಿರುವ ಯುಶಿರೋ ಸುಕಾಮೊಟೋ ಹಾಗೂ ಅವರ ತಂಡ ಆಸ್ಟ್ರಿಚ್​ ಆ್ಯಂಟಿಬಾಡಿಗಳನ್ನು ಹೊಂದಿರುವ ಮಾಸ್ಕ್​​ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹಿಂದಿನ ಅಧ್ಯಯನಗಳು ಆಸ್ಟ್ರಿಚ್​ಗಳು ಈ ವೈರಸ್​ನ ವಿರುದ್ಧ ಹೆಚ್ಚಿನ ಪ್ರತಿರೋಧಕಗಳನ್ನು ಹೊಂದಿದೆ ಎಂಬುದು ಸಾಬೀತಾಗಿದೆ.

ಸಂಶೋಧಕರು ಆಸ್ಟ್ರಿಚ್​ಗಳ ಆ್ಯಂಟಿಬಾಡಿಗಳಿಂದ ಮಾಡಲಾದ ಮಾಸ್ಕ್​ಗಳನ್ನು ಎಂಟು ಗಂಟೆಗಳ ಕಾಲ ಧರಿಸಲು ನೀಡಿದ ಬಳಿಕ ಮಾಸ್ಕ್​ನ್ನು ವಾಪಸ್​ ಪಡೆದರು. ಬಳಿಕ ಮಾಸ್ಕ್​​ನಲ್ಲಿದ್ದ ಫಿಲ್ಟರ್​ನ್ನು ತೆಗೆದು ಹಾಕಲಾಯ್ತು. ಇದೀಗ ಮಾಸ್ಕ್​ ಮೇಲ್ಮೈನಲ್ಲಿ ವೈರಸ್​ ಇದ್ದರೆ ನೇರಳಾತೀತ ಬೆಳಕಿನ ಅಡಿಯಲ್ಲಿ ಅದು ಹೊಳೆಯುವಂತೆ ಮಾಡಲು ರಾಸಾಯನಿಕವನ್ನು ಸಿಂಪಡಣೆ ಮಾಡಲಾಗಿದೆ.

ಈ ಬೆಳಕಿನ ಅಡಿಯಲ್ಲಿ ಕೋವಿಡ್ ಪಾಸಿಟಿವ್​ ಹೊಂದಿರುವ ವ್ಯಕ್ತಿಗಳು ಧರಿಸಿದ್ದ ಫಿಲ್ಟರ್​ನ ಮೂಗು ಹಾಗೂ ಬಾಯಿಯ ಭಾಗದಲ್ಲಿ ಹೊಳೆಯುವ ಅಂಶವು ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...