
ಜಪಾನ್ನಲ್ಲಿ ಸುಡುವ ಶಾಖವನ್ನು ಎದುರಿಸೋದು ಸುಲಭವಲ್ಲ. ಹೀಗಾಗಿ ಇದಕ್ಕೆ ಪ್ರತಿಯಾಗಿ ಹೊಸ ಮಾದರಿಯ ಜಾಕೆಟ್ವೊಂದನ್ನು ಜಪಾನ್ನ ಕಂಪನಿಯೊಂದು ತಯಾರಿಸಿದೆ. ಜಪಾನ್ನಲ್ಲಿ ಸೂರ್ಯನ ಧಗೆಯನ್ನು ಎದುರಿಸಲು ಫ್ಯಾನ್ ಹೊಂದಿರುವ ಜಾಕೆಟ್ನ್ನು ಆವಿಷ್ಕಾರ ಮಾಡಿದೆ.
ಟ್ವಿಟರ್ನಲ್ಲಿ ಈ ಜಾಕೆಟ್ನ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಫ್ಯಾನ್ ಹೊಂದಿರುವ ಕೂಲಿಂಗ್ ಜಾಕೆಟ್ ಧರಿಸಿ ತಮ್ಮ ಕೆಲಸವನ್ನು ಮಾಡುತ್ತಿರುವ ವಿಡಿಯೋ 6 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ. ಈ ಜಾಕೆಟ್ನಲ್ಲಿ ಗಾಳಿಯನ್ನು ಬೀಸುವ ಫ್ಯಾನ್ ಇರೋದನ್ನು ನೀವು ಕಾಣಬಹುದಾಗಿದೆ.
ಈ ವಿಡಿಯೋವು ಟ್ವಿಟರ್ನಲ್ಲಿ ಹೊಸದೊಂದು ಚರ್ಚೆಯನ್ನು ಸೃಷ್ಟಿಸಿದೆ. ಕಮೆಂಟ್ ವಿಭಾಗದಲ್ಲಿ ವ್ಯಕ್ತಿಯೊಬ್ಬರು ಈ ರೀತಿಯ ಜಾಕೆಟ್ ಧರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಇಂತಹ ಜಾಕೆಟ್ ತುಂಬಾನೇ ಸಹಕಾರಿ ಎಂದಿದ್ದಾರೆ. ಇಂತಹ ನವೀನ ಉಡುಪುಗಳ ಬಗ್ಗೆ ಅನೇಕರು ಆಶ್ಚರ್ಯ ಹೊರ ಹಾಕಿದ್ದಾರೆ.