ತಂತ್ರಜ್ಞಾನದ ವಿಷ್ಯದಲ್ಲಿ ಜಪಾನ್ ಸದಾ ಸುದ್ದಿಯಲ್ಲಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜಪಾನ್ ಭಿನ್ನ ವಿಷ್ಯಕ್ಕೆ ಚರ್ಚೆಯಲ್ಲಿದೆ. ಜಪಾನ್ ಪ್ರಧಾನಿಯಿಂದ ಹಿಡಿದು ಅಧಿಕಾರಿಗಳವರೆಗೆ ಎಲ್ಲರೂ ದೇಶವಾಸಿಗಳಿಗೆ ಹಾಲು ಕುಡಿಯುವಂತೆ ಮನವಿ ಮಾಡುತ್ತಿದ್ದಾರೆ. ಜನರು ಒಂದು ಲೋಟ ಹೆಚ್ಚು ಹಾಲು ಕುಡಿಯುವಂತೆ ಹಾಗೂ ಹೆಚ್ಚು ಹಾಲಿನ ಉತ್ಪನ್ನಗಳನ್ನು ಆಹಾರದಲ್ಲಿ ಬಳಸುವಂತೆ ಮನವಿ ಮಾಡಲಾಗ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುವ ಜಪಾನ್ ಸಚಿವರು ಹಾಲು ಕುಡಿಯುತ್ತಿದ್ದಾರೆ. ಇತ್ತೀಚೆಗೆ ಕಂಪನಿಯೊಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರಲ್ಲಿ ಸೆಲೆಬ್ರಿಟಿಗಳು ಹಾಲು ಕುಡಿಯಲು ಜನರನ್ನು ಪ್ರೋತ್ಸಾಹಿಸುತ್ತಿರುವುದು ಕಂಡುಬಂದಿದೆ. ಇದೀಗ ಪ್ರಧಾನಿ ಫ್ಯೂಮಿಯೊ ಕಿಶಿಡಾ ಕೂಡ ಹೆಚ್ಚುವರಿ ಹಾಲು ಕುಡಿಯುವಂತೆ ಜಪಾನ್ ಜನತೆಗೆ ಮನವಿ ಮಾಡಿದ್ದಾರೆ.
ಭರ್ಜರಿ ಗುಡ್ ನ್ಯೂಸ್: ಖಾತೆಯಲ್ಲಿ ಹಣವಿಲ್ಲದಿದ್ರೂ 10 ಸಾವಿರ ರೂ.; ಜನ್ ಧನ್ ಖಾತೆದಾರರಿಗೆ ಸೌಲಭ್ಯ
ಮಂಗಳವಾರ ಸಂಸತ್ತಿನ ಅಧಿವೇಶನದ ಕೊನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ, ಒಂದು ಲೋಟ ಹೆಚ್ಚುವರಿ ಹಾಲು ಕುಡಿಯಲು ಮತ್ತು ಅಡುಗೆ ಮಾಡುವಾಗ ಹೆಚ್ಚಿನ ಹಾಲಿನ ಉತ್ಪನ್ನಗಳನ್ನು ಬಳಸಲು ಜನರು ಸಹಕರಿಸಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ. ಜಪಾನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲು ವ್ಯರ್ಥವಾಗುತ್ತಿದೆ. ಇದನ್ನು ತಡೆಯಲು ಇದೆಲ್ಲ ಕಸರತ್ತು ನಡೆಯುತ್ತಿದೆ. ಈ ಚಳಿಗಾಲದಲ್ಲಿಯೇ ಸುಮಾರು 5000 ಟನ್ ಹಾಲು ವ್ಯರ್ಥವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಜಪಾನ್‌ನಲ್ಲಿ ಹಾಲಿನ ಬೇಡಿಕೆಯು ಈ ವರ್ಷ ಗಮನಾರ್ಹವಾಗಿ ಕಡಿಮೆಯಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಹಾಲು ನೀಡಲಾಗುತ್ತಿತ್ತು., ಆದರೆ ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಿವೆ.