ಜಪಾನಿನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಪ್ರೌಢಶಾಲೆಯೊಂದರ ಕ್ರೀಡಾಕೂಟದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರಿನ ಬದಲಾಗಿ ಸ್ಯಾನಿಟೈಸರ್ ಕುಡಿದು ಅಸ್ವಸ್ಥರಾದ ಘಟನೆ ಇದು. ಈ ಬಗ್ಗೆ ಜಪಾನ್ ಸರ್ಕಾರ ತನಿಖೆಗೆ ಆದೇಶ ನೀಡಿದೆ.
ಕಳೆದ ವಾರ ಜಪಾನ್ ನ ತಮನಾಶಿಯಲ್ಲಿ ಹೆಣ್ಣು ಮಕ್ಕಳ 5,000 ಮೀಟರ್ ನಡಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧಿಗಳಿಗೆಂದು ಮಾರ್ಗಮಧ್ಯದಲ್ಲಿ ಡ್ರಿಂಕ್ ಸ್ಟೇಶನ್ ನಲ್ಲಿ ಲೋಟದಲ್ಲಿ ನೀರು ಹಾಕಿ ಇಡುವ ಬದಲಾಗಿ ಸ್ಯಾನಿಟೈಸರ್ ಹಾಕಿ ಇಡಲಾಗಿತ್ತು.
ಮೋದಿಯಿಂದ ಎರಡು ಭಾರತ ನಿರ್ಮಾಣ: ರಾಹುಲ್ ಗಾಂಧಿ ಟೀಕೆ
ಈ ಲೋಟದಲ್ಲಿರುವುದು ನೀರು ಎಂದು ತಿಳಿದ ಮೂವರು ಸ್ಪರ್ಧಿಗಳು ಕುಡಿದಿದ್ದಾರೆ. ಈ ಪೈಕಿ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದ ಸ್ಪರ್ಧಿ ವಾಂತಿ ಮಾಡಿಕೊಂಡಿದ್ದಾಳೆ. ಇನ್ನಿಬ್ಬರು ಸ್ವಲ್ಪ ದೂರ ಹೋದ ನಂತರ ಅಸ್ವಸ್ಥರಾಗಿದ್ದಾರೆ. ಕೂಡಲೇ ಈ ಮೂವರನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಲಸಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಮನಾಶಿ ಪ್ರೌಢಶಾಲೆ ಕ್ರೀಡಾ ಸಂಘವು, ಸ್ಯಾನಿಟೈಸರ್ ಇದ್ದ ಲೇಬಲ್ ಇಲ್ಲದ ಪ್ಲಾಸ್ಟಿಕ್ ಬಾಟಲಿಯನ್ನು ನೀರಿನ ಬಾಟಲಿಗಳ ಸಮೀಪ ಇಡಲಾಗಿತ್ತು. ಡ್ರಿಂಕ್ ಸ್ಟೇಶನ್ ನ ಸ್ವಯಂ ಸೇವಕರು ತಿಳಿಯದೇ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ಸ್ಯಾನಿಟೈಸರ್ ಅನ್ನು ನೀರಿನ ಲೋಟಕ್ಕೆ ಹಾಕಿದ್ದರ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಕ್ಷಮೆ ಯಾಚನೆ ಮಾಡಿರುವ ಯಮನಾಶಿ ಗವರ್ನರ್ ಕೊಟಾರೊ ನಾಗಾಸಾಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.