alex Certify ಎರಡು ತಲೆ ಆಮೆಯ 25 ನೇ ಹುಟ್ಟುಹಬ್ಬ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ತಲೆ ಆಮೆಯ 25 ನೇ ಹುಟ್ಟುಹಬ್ಬ ಆಚರಣೆ

ಪ್ರಕೃತಿ ವೈಚಿತ್ರದ ಬಗ್ಗೆ ಅನೇಕ ಸಾಕ್ಷ್ಯಗಳು ಸಿಗುತ್ತವೆ, ಇಲ್ಲೊಂದು ಆಮೆ ಎರಡು ತಲೆ ಹೊಂದಿದ್ದು, ಅದನ್ನು ಜತನದಿಂದ ಕಾಪಾಡಲಾಗುತ್ತಿದೆ. ಅಂದಹಾಗೆ ಈ ಎರಡು ತಲೆಯ ಆಮೆಯ 25ನೇ ಹುಟ್ಟು ಹಬ್ಬದ ಆಚರಣೆ ನೆರವೇರಿಸಲಾಯಿತು.

1997 ರಲ್ಲಿ ಮೊಟ್ಟೆಯೊಡೆದ ಆ ಆಮೆ ಜಿನೀವಾ ನ್ಯಾಚುರಲ್​ ಹಿಸ್ಟರಿ ಮ್ಯೂಸಿಯಂನಲ್ಲಿ, ಬೂಗೋರ್ಯಿನ್​ ಮತ್ತು ಅವರ ಆರೈಕೆದಾರರ ತಂಡದ ಆಶ್ರಯಕ್ಕೆ ಬಂದಿತು.

ಎರಡು ಹೃದಯಗಳು, ಎರಡು ಜೋಡಿ ಶ್ವಾಸಕೋಶಗಳು ಮತ್ತು ಎರಡು ವಿಭಿನ್ನ ವ್ಯಕ್ತಿತ್ವ ಹೊಂದಿರುವ ಜಾನಸ್​, ಪರಭಕ್ಷಕಗಳಿಂದ ಆಶ್ರಯ ಪಡೆಯಲು ತನ್ನ ತಲೆಯನ್ನು ತನ್ನ ಚಿಪ್ಪಿನೊಳಗೆ ಹಿಂತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಇದನ್ನು ವಿಶ್ವದ ಅತ್ಯಂತ ಹಳೆಯ ಬೈಸೆಫಾಲಿಕ್​ ಆಮೆ ಎಂದು ನಂಬುತ್ತಾರೆ.

ಆಮೆಗೆ ಸಾವಯವ ಸಲಾಡ್​ ತಿನ್ನಿಸುತ್ತಾರೆ, ಗ್ರೀನ್​ ಟೀ ಮತ್ತು ಕ್ಯಾಮೊಮೈಲ್​ನಲ್ಲಿ ಮಸಾಜ್​ ಮತ್ತು ಸ್ನಾನವನ್ನು ಮಾಡಿಸಲಾಗುತ್ತದೆ. ಕೆಲಮೊಮ್ಮೆ ಸಂಗೀತದೊಂದಿಗೆ ಸ್ಕೇಟ್ಬೋರ್ಡ್​ಲ್ಲಿ ಸವಾರಿ ಕೂಡ ಮಾಡುತ್ತದೆ.

ಎರಡು ತಲೆಯ ರೋಮನ್​ ದೇವರ ಹೆಸರಿನ ಗ್ರೀಕ್​ ಆಮೆಯಾದ ಜಾನಸ್​ ಕೂಡ ಈ ವಾರದ ವಾರಾಂತ್ಯದಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...