ಪ್ರಕೃತಿ ವೈಚಿತ್ರದ ಬಗ್ಗೆ ಅನೇಕ ಸಾಕ್ಷ್ಯಗಳು ಸಿಗುತ್ತವೆ, ಇಲ್ಲೊಂದು ಆಮೆ ಎರಡು ತಲೆ ಹೊಂದಿದ್ದು, ಅದನ್ನು ಜತನದಿಂದ ಕಾಪಾಡಲಾಗುತ್ತಿದೆ. ಅಂದಹಾಗೆ ಈ ಎರಡು ತಲೆಯ ಆಮೆಯ 25ನೇ ಹುಟ್ಟು ಹಬ್ಬದ ಆಚರಣೆ ನೆರವೇರಿಸಲಾಯಿತು.
1997 ರಲ್ಲಿ ಮೊಟ್ಟೆಯೊಡೆದ ಆ ಆಮೆ ಜಿನೀವಾ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ, ಬೂಗೋರ್ಯಿನ್ ಮತ್ತು ಅವರ ಆರೈಕೆದಾರರ ತಂಡದ ಆಶ್ರಯಕ್ಕೆ ಬಂದಿತು.
ಎರಡು ಹೃದಯಗಳು, ಎರಡು ಜೋಡಿ ಶ್ವಾಸಕೋಶಗಳು ಮತ್ತು ಎರಡು ವಿಭಿನ್ನ ವ್ಯಕ್ತಿತ್ವ ಹೊಂದಿರುವ ಜಾನಸ್, ಪರಭಕ್ಷಕಗಳಿಂದ ಆಶ್ರಯ ಪಡೆಯಲು ತನ್ನ ತಲೆಯನ್ನು ತನ್ನ ಚಿಪ್ಪಿನೊಳಗೆ ಹಿಂತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಇದನ್ನು ವಿಶ್ವದ ಅತ್ಯಂತ ಹಳೆಯ ಬೈಸೆಫಾಲಿಕ್ ಆಮೆ ಎಂದು ನಂಬುತ್ತಾರೆ.
ಆಮೆಗೆ ಸಾವಯವ ಸಲಾಡ್ ತಿನ್ನಿಸುತ್ತಾರೆ, ಗ್ರೀನ್ ಟೀ ಮತ್ತು ಕ್ಯಾಮೊಮೈಲ್ನಲ್ಲಿ ಮಸಾಜ್ ಮತ್ತು ಸ್ನಾನವನ್ನು ಮಾಡಿಸಲಾಗುತ್ತದೆ. ಕೆಲಮೊಮ್ಮೆ ಸಂಗೀತದೊಂದಿಗೆ ಸ್ಕೇಟ್ಬೋರ್ಡ್ಲ್ಲಿ ಸವಾರಿ ಕೂಡ ಮಾಡುತ್ತದೆ.
ಎರಡು ತಲೆಯ ರೋಮನ್ ದೇವರ ಹೆಸರಿನ ಗ್ರೀಕ್ ಆಮೆಯಾದ ಜಾನಸ್ ಕೂಡ ಈ ವಾರದ ವಾರಾಂತ್ಯದಲ್ಲಿ ಪಾರ್ಟಿಯಲ್ಲಿ ಪಾಲ್ಗೊಂಡಿತ್ತು.